ಸೋನು ಸೂದ್ ವಿರುದ್ಧ ಮುಂಬೈ ಮಹಾನಗರ ಪಾಲಿಕೆ ಪ್ರಕರಣ ದಾಖಲಿಸಿದ್ದೇಕೆ !?

ಮುಂಬೈ, ಜನವರಿ 07, 2021 (www.justkannada.in): ಬಾಲಿವುಡ್ ನಟ ಸೋನು ಸೂದ್ ವಿರುದ್ಧ (ಬೃಹತ್ ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್) ಬಿಎಂಸಿ ಪ್ರಕರಣ ದಾಖಲಿಸಿದೆ.

ಅನುಮತಿ ಪಡೆಯದೆಯೇ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಿದ ಹಿನ್ನೆಲೆಯಲ್ಲಿ ಬಿಎಂಸಿ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.

ಜುಹು ವಿನಲ್ಲಿ ಸೋನು ಸೂದ್ ಅವರಿಗೆ ಸೇರಿದ 6 ಮಹಡಿಯ ಕಟ್ಟಡವಿದ್ದು, ಈ ಕಟ್ಟಡವನ್ನು ಇತ್ತೀಚೆಗಷ್ಟೇ ಹೋಟೆಲ್ ಆಗಿ ಮಾರ್ಪಡಿಸಲಾಗಿತ್ತು ಎನ್ನಲಾಗಿದೆ.