ನಾಳೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ವ್ಯಾಕ್ಸಿನ್ ಡ್ರೈ ರನ್…

ಬೆಂಗಳೂರು,ಜನವರಿ,7,2021(www.justkannada.in):  ಕಳೆದ ಮೂರ್ನಾಲ್ಕು ದಿನಗಳ ಹಿಂದೆ ರಾಜ್ಯದ 5 ಜಿಲ್ಲೆಗಳ ಆಯ್ದ ಕೇಂದ್ರಗಳಲ್ಲಿ ನಡೆದ ಕೊರೋನಾ ವ್ಯಾಕ್ಸಿನ್ ಡ್ರೈರನ್ ಯಶಸ್ವಿಯಾದ ಬೆನ್ನಲ್ಲೆ ಇದೀಗ ನಾಳೆ ಮತ್ತೊಮ್ಮೆ ಲಸಿಕೆ ತಾಲೀಮಿಗೆ ಸಿದ್ದತೆ ನಡೆಸಲಾಗುತ್ತಿದೆ.jk-logo-justkannada-mysore

ನಾಳೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕೊರೊನಾ ವ್ಯಾಕ್ಸಿನ್ ಡ್ರೈರನ್ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಈಗಾಗಲೇ ಪ್ರಾಯೋಗಿಕವಾಗಿ ಐದು ಜಿಲ್ಲೆಗಳಲ್ಲಿ ಡ್ರೈರನ್(ಪೂರ್ವಾಭ್ಯಾಸ) ಯಶಸ್ವಿಯಾಗಿ ಮುಗಿದಿರುವ ಬೆನ್ನಲ್ಲೇ ನಾಳೆಯಿಂದ ರಾಜ್ಯ ಸರ್ಕಾರ 30 ಜಿಲ್ಲೆಗಳಲ್ಲೂ ಪೂರ್ವಾಭ್ಯಾಸ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯದ ಪ್ರತಿ ಜಿಲ್ಲೆಯ 5 ಕೇಂದ್ರಗಳಲ್ಲಿ  ಕೊರೋನಾ ಲಸಿಕೆ ಡ್ರೈ ರನ್ ನಡೆಯಲಿದೆ ಎನ್ನಲಾಗುತ್ತಿದೆ.Corona Vaccine- Dry run - all districts -across -state -tomorrow.

ಜನವರಿ 2 ರಂದು ರಾಜ್ಯದ ಬೆಂಗಳೂರು, ಮೈಸೂರು, ಶಿವಮೊಗ್ಗ, ಕಲ್ಬುರ್ಗಿ ಸೇರಿ 5 ಜಿಲ್ಲೆಗಳ 16 ಕೇಂದ್ರಗಳಲ್ಲಿ ಡ್ರೈ ರನ್  ನಡೆದಿತ್ತು.

Key words: Corona Vaccine- Dry run – all districts -across -state -tomorrow.