Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Cinema ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಫಿಲ್ಮಂ ಛೇಂಬರ್ ನಿಂದ ಸಿಎಂ ಬಿಎಸ್ ವೈ ಭೇಟಿ: ಮನವಿ...

ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಫಿಲ್ಮಂ ಛೇಂಬರ್ ನಿಂದ ಸಿಎಂ ಬಿಎಸ್ ವೈ ಭೇಟಿ: ಮನವಿ ಸಲ್ಲಿಕೆ…

ಬೆಂಗಳೂರು,ಸೆಪ್ಟಂಬರ್,9,2020(www.justkannada.in):  ಲಾಕ್ ಡೌನ್ ವೇಳೆ ಚಿತ್ರರಂಗಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದು ಹೀಗಾಗಿ ಆರ್ಥಿಕ ನೆರವು ನೀಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಫಿಲ್ಮಂ ಚೇಂಬರ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಚಿತ್ರರಂಗ ಭೇಟಿಯಾಗಿ ವಿವಿಧ ಬೇಡಿಕೆ ಈಡೇರಿಕೆ ಮತ್ತು ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿತು. ಲಾಕ್ ಡೌನ್ ವೇಳೆ ಚಿತ್ರರಂಗಕ್ಕೆ ನಷ್ಟ ಉಂಟಾಗಿದೆ. ಹೀಗಾಗಿ ಅರ್ಥಿಕ ನೆರವು ನೀಡಬೇಕು ಮತ್ತು  ಥಿಯೇಟರ್ ತೆರೆಯಲು ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದರು.  ಈ ವೇಳೆ ನಿರ್ಮಾಪಕ ಸಾ.ರಾ ಗೋವಿಂದು, ನಟರಾದ ಯಶ್, ದುನಿಯಾ ವಿಜಯ್ ನಟಿ ತಾರಾ ಮತ್ತಿತರರು ಉಪಸ್ಥಿತರಿದ್ದರು.meet-cm-bs-yeddyurappa-film-chamber-led-by-actor-shivraj-kumar

ಸಿಎಂ ಭೇಟಿ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್,  ಲಾಕ್ ಡೌನ್ ನಿಂದ ಚಿತ್ರರಂಗಕ್ಕೆ ಆದ ನಷ್ಟದ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದೇವೆ. ನಟರು ಎಂದಾಕ್ಷಣ ಸಮಸ್ಯೆ ಇಲ್ಲ ಎನ್ನಲಾಗಲ್ಲ. ಚಿತ್ರರಂಗದ ಸಮಸ್ಯೆ ಬಗ್ಗೆ ಸಿಎಂ ಬಳಿ ಮನವಿ ಮಾಡಿಕೊಂಡಿದ್ದೇವೆ. ಆದಷ್ಟ ಬೇಗ ಸಮಸ್ಯೆ ಪರಿಹರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

Key words: meet-CM BS yeddyurappa -Film Chamber- actor- Shivraj Kumar.