ನಾಳೆ ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್

ಬೆಂಗಳೂರು,ಮೇ,19,2026 (www.justkannada.in): ಆನ್ ಲೈನ್ ನಲ್ಲಿ ಔಷಧಗಳ ಮಾರಾಟ ವಿರೋಧಿಸಿ ನಾಳೆ ದೇಶಾದ್ಯಂತ ಮೆಡಿಕಲ್ ಶಾಪ್ ಗಳ ಬಂದ್ ಗೆ ಕರೆ ನೀಡಲಾಗಿದೆ.

ಆಲ್ ಇಂಡಿಯಾ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಸಂಘಟನೆಯಿಂದ ಬಂದ್ ಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ನಾಳೆ ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್ ಆಗುವ ಸಾಧ್ಯತೆ ಇದೆ. ಸುಮಾರು 12.4 ಲಕ್ಷಕ್ಕೂ ಹೆಚ್ಚು ಮೆಡಿಕಲ್ ಶಾಪ್ ಗಳು ಸ್ಥಗಿತವಾಗಲಿವೆ ಎನ್ನಲಾಗಿದೆ.

ಆನ್ ಲೈನ್ ನಲ್ಲಿ ಔಷಧಗಳ ಮಾರಾಟಕ್ಕೆ ಮತ್ತು ಇ-ಫಾರ್ಮಸಿ ಪ್ಲಾಟ್ ಫಾರ್ಮ್ ನಲ್ಲಿ ರಿಯಾಯಿತಿಗೆ ವಿರೋಧಿಸಿ ಬಂದ್ ಕರೆ ನೀಡಲಾಗಿದೆ. ಹೀಗಾಗಿ ಕರ್ನಾಟಕದಲ್ಲೂ ನಾಳೆ ಔಷಧ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ.

Key words: Medical shops, country, close, tomorrow