Friday, October 2, 2026

BDA Apartments

Home Front Page ಸಕಲ ಸಿದ್ಧತೆಗಳೊಂದಿಗೆ ದಸರಾಗೆ ಕಂಬಳ ಸಜ್ಜು – ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಸಕಲ ಸಿದ್ಧತೆಗಳೊಂದಿಗೆ ದಸರಾಗೆ ಕಂಬಳ ಸಜ್ಜು – ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು ಅಕ್ಟೋಬರ್, 2,2026 (www.justkannada.in): ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ವಿಶೇಷವಾಗಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು  ನಗರಾಭಿವೃದ್ಧಿ ಮತ್ತು  ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದರು.

ಇಂದು ದಸರಾ ಮಹೋತ್ಸವದ ಅಂಗವಾಗಿ ಕಂಬಳ ಆಯೋಜನೆಯ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿದರು.

ಈ ಬಾರಿಯ ದಸರಾ ಉತ್ಸವಕ್ಕೆ  ಹೊಸ ರೂಪ ಮತ್ತು ಸ್ಪರ್ಶ ನೀಡುವ ಉದ್ದೇಶದಿಂದ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಮೈಸೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಈ ಕಂಬಳ ಕೂಟವನ್ನು ಅಕ್ಟೋಬರ್ 18  ರಂದು ಆಯೋಜಿಸಲು ಉದ್ದೇಶಿಸಲಾಗಿದೆ. ಕಂಬಳ ಆಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಪುತ್ತೂರಿನ ಶಾಸಕರಾದ ಅಶೋಕ್ ರೈ ಅವರಿಗೆ ವಹಿಸಲಾಗಿದ್ದು, ಜಿಲ್ಲಾಡಳಿತವು ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಕಂಬಳದ ಸಂಘಟಕರು ಇದನ್ನು ಯಾವುದೇ ಲಾಭದ ಉದ್ದೇಶವಿಲ್ಲದೆ, ಸಂಪ್ರದಾಯ ಹಾಗೂ ಕ್ರೀಡೆಯನ್ನು ಜೀವಂತವಾಗಿಡಲು ಆಯೋಜಿಸುತ್ತಿದ್ದಾರೆ. ಈ ದೇಶೀಯ ಕ್ರೀಡೆಯನ್ನು ಉಳಿಸಿ ಬೆಳೆಸಲು ಸರ್ಕಾರ ಮತ್ತು ಜಿಲ್ಲಾಡಳಿತ ಬೆಂಬಲ ನೀಡಲಿದೆ. ದಸರಾ ವೀಕ್ಷಣೆಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದರಿಂದ, ಕಂಬಳವನ್ನು ಇಲ್ಲಿ ಪ್ರದರ್ಶಿಸುವುದರಿಂದ ಈ ಜಾನಪದ ಕ್ರೀಡೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಮತ್ತು ಪ್ರಚಾರ ಸಿಗಲಿದೆ ಎಂದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ  ಅವರು ಮಾತನಾಡಿ  ಕಂಬಳದ ಯಶಸ್ಸಿಗೆ ಅಗತ್ಯವಿರುವ ಶಾಮಿಯಾನ, ನಿರ್ಮಿತಿ ಕೇಂದ್ರದಿಂದ ಕಾಮಗಾರಿಗಳು ಹಾಗೂ ಮೂಲಸೌಕರ್ಯಗಳ ಎಲ್ಲಾ ವ್ಯವಸ್ಥೆಗಳನ್ನು ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳ ತಂಡ ಮಾಡಿಕೊಡಲಿದೆ. ಕಂಬಳ ಆಯೋಜನೆಯಲ್ಲಿ ಈಗಾಗಲೇ ಸಾಕಷ್ಟು ಅನುಭವ ಹೊಂದಿರುವ ತಂಡವು ಮುಂಚೂಣಿಯಲ್ಲಿ ನಿಂತು ಜವಾಬ್ದಾರಿ ವಹಿಸಿಕೊಂಡಿದ್ದು ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಲಿದೆ. ಮುಖ್ಯಮಂತ್ರಿಗಳು ದಸರಾ ಆಚರಣೆಗೆ ವಿಶೇಷ ಆಸಕ್ತಿ ವಹಿಸಿದ್ದು, ಕಂಬಳ ಆಯೋಜನೆಗೆ ಅಗತ್ಯವಿರುವ ಹಣಕಾಸಿನ ನೆರವು ಹಾಗೂ ಆರ್ಥಿಕ ವ್ಯವಸ್ಥೆಯನ್ನು ಒದಗಿಸಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಈ ಕ್ರೀಡಾಕೂಟವನ್ನು ನೋಡಿ ನಮ್ಮಲ್ಲೂ ಪ್ರತಿವರ್ಷ ಕಂಬಳ ಆಯೋಜಿಸಿ ಎಂದು ಮೆಚ್ಚಿಕೊಳ್ಳುವ ರೀತಿಯಲ್ಲಿ ಕಾರ್ಯಕ್ರಮ ಮೂಡಿಬರಬೇಕು.

ಈ ಬಾರಿಯ ದಸರಾದಲ್ಲಿ ಏರ್‌ ಶೋ,  ಮುಂತಾದ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳಿದ್ದರೂ, ಕಂಬಳ ಕ್ರೀಡಾಕೂಟವೇ ದಸರಾದ ಪ್ರಮುಖ ಆಕರ್ಷಣೆಯಾಗಿ ಮೇಲುಗೈ ಸಾಧಿಸಬೇಕು ಹಾಗೂ ಎಲ್ಲರೂ ಮೆಚ್ಚುವಂತೆ ಯಶಸ್ವಿಯಾಗಬೇಕು ಎಂದು ಹೇಳಿದರು.Kambala

ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್  ರೈ ಅವರು ಮಾತನಾಡಿ ಕಂಬಳ ಸ್ಪರ್ಧೆಗಾಗಿ 145 ಮೀಟರ್ ಉದ್ದದ ಟ್ರ್ಯಾಕ್  ಸಿದ್ಧಪಡಿಸಲಾಗುತ್ತಿದೆ. ಈ ಕೂಟದಲ್ಲಿ ಹಿಂದೆ ಉತ್ತಮ ದಾಖಲೆ ಬರೆದಿರುವ ಹಿರಿಯ ದರ್ಜೆಯ ಸುಮಾರು 150 ರಿಂದ 160 ಜೋಡಿ ಕೋಣಗಳು ಭಾಗವಹಿಸಲಿವೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬೃಹತ್ ಪ್ರಚಾರ ಫಲಕಗಳನ್ನು  ಹಾಕಲಾಗುವುದು ಎಂದರು.

ಕಂಬಳವು ಯಾವುದೇ ವಾಣಿಜ್ಯ ಉದ್ದೇಶ ಹೊಂದಿಲ್ಲ, ಇದು ಕರಾವಳಿ ಜನರ ಗೌರವ ಮತ್ತು ಸಂಪ್ರದಾಯದ ಸಂಕೇತವಾಗಿದೆ. ಒಂದು ಜೋಡಿ ಕೋಣವನ್ನು ಕರೆತರಲು ಯಜಮಾನರಿಗೆ ಸುಮಾರು 2 ಲಕ್ಷ ರೂಪಾಯಿ ಖರ್ಚಾಗುತ್ತದೆ. ವಿಜೇತರಿಗೆ 16 ಗ್ರಾಂ ಹಾಗೂ 8 ಗ್ರಾಂ ಚಿನ್ನದ ಬಹುಮಾನ ನೀಡಲಾಗುತ್ತದೆ. ಕಂಬಳ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, 8,000 ಜನರು ಕುಳಿತು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ವಿದೇಶಿ ಪ್ರವಾಸಿಗರಿಗಾಗಿ ವಿಶೇಷ ಕೌಂಟರ್ ಹಾಗೂ ಪಾಸ್ ವ್ಯವಸ್ಥೆ ಇರಲಿದೆ ಎಂದು ಹೇಳಿದರು.Kambala

ಕಂಬಳದ ಜೊತೆಗೆ ಕರಾವಳಿ ಭಾಗದ ಪ್ರಸಿದ್ಧ ಖಾದ್ಯಗಳಾದ ಕೋಳಿ ರೊಟ್ಟಿ, ಪುಂಡಿ, ನೀರ್ ದೋಸೆ ಮುಂತಾದ ಆಹಾರ ಪದಾರ್ಥಗಳ ಮಳಿಗೆಗಳು ಮತ್ತು ಸಾಂಸ್ಕೃತಿಕ ಪ್ರದರ್ಶನ ಇರಲಿದೆ. ಅಕ್ಟೋಬರ್ 18 ರ ಸಾಯಂಕಾಲ 6:30ಕ್ಕೆ ಕಂಬಳ ಕ್ರೀಡಾಕೂಟಕ್ಕೆ ಅಧಿಕೃತ ಉದ್ಘಾಟನೆ ಸಿಗಲಿದ್ದು, ಅಕ್ಟೋಬರ್ 19 ರ ಸಾಯಂಕಾಲದವರೆಗೆ ನಿರಂತರವಾಗಿ ನಡೆದು ಬಹುಮಾನ ವಿತರಣೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.Mysore Dasara jk02_new jk02 new

ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಸನಿಲ್, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಹಾಗೂ ಕಂಬಳ ಸಮಿತಿಯ ಇತರ ಪದಾಧಿಕಾರಿಗಳು, ಆಯೋಜಕರು ಮತ್ತು ಕೋಣಗಳ ಯಜಮಾನರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

English Summary
Title

Mysuru Dasara 2026: Dr. Yathindra Siddaramaiah Confirms Kambala Race Dates

Short Description
Mysuru Dasara 2026 is scaling up with Kambala, the traditional coastal buffalo race, officially confirmed for October 18–19 at Satagalli. Under the leadership of Mysuru District In-charge Minister Dr. Yathindra Siddaramaiah, the Karnataka government has launched the official festival website and promotional posters for Yuva and Raitha Dasara. To ensure seamless event execution and crowd safety, a strategic 22-minister oversight plan has been deployed. Dr. Yathindra recently led a delegation to formally invite Governor Thaawarchand Gehlot and Chief Minister D.K. Shivakumar, while reviewing high-level safety setups and festival worker welfare at the Mysore Palace.
Keywords
: Kambala, Mysore Dasara, preparations, Minister, Dr. Yathindra Siddaramaiah