Wednesday, August 12, 2026

BDA Apartments

Home Front Page ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ –ಉಪಮೇಯರ್ ಚುನಾವಣೆ: ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ…

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ –ಉಪಮೇಯರ್ ಚುನಾವಣೆ: ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ…

ದಾವಣಗೆರೆ,ಫೆ,19,2020(www.justkannada.in):  ದಾವಣಗೆರೆ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿ ನಡೆಸುತ್ತಿವೆ.

ದಾವಣಗೆರೆ ಪಾಲಿಕೆ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ದೇವರಮನೆ ಶಿವಕುಮಾರ್, ಬಿಜೆಪಿಯಿಂದ ಅಜಯ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಮೇಯರ್ ಉಪಮೇಯರ್ ಸ್ಥಾನದ ಚುನಾವಣೆ ಹಿನ್ನೆಲೆ ಕಾರ್ಪೋರೇಟರ್ ಗಳು ಪಾಲಿಕೆಗೆ ಆಗಮಿಸಿದ್ದಾರೆ.

ಒಟ್ಟು ಚುನಾವಣೆಯಲ್ಲಿ 62 ಮಂದಿ ಮತಚಲಾಯಿಸಲಿದ್ದಾರೆ.  ದಾವಣಗೆರೆ ನಗರ ಪಾಲಿಕೆಯಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1 ಮತ್ತು ಇತರೆ 5 ಮಂದಿ ಸದಸ್ಯರಿದ್ದಾರೆ.

Key words: Mayor-Deputy Mayor – Davanagere –corpration-: Nominations- filed – BJP -Congress -candidates