Friday, October 9, 2026

BDA Apartments

ಇವರ ಗೆಲುವು ಬಹುತೇಕ ಖಚಿತ BDA JK_Adv BDA Adv
Home Crime ಪಂಜಾಬ್’ನಲ್ಲಿ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಪಂಜಾಬ್’ನಲ್ಲಿ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಲೂಧಿಯಾನ (ಪಂಜಾಬ್), ಡಿಸೆಂಬರ್ 20, 2020 (www.justkannada.in): ಐವರು ಕಾಮುಕರು ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಮಾಲ್’ವೊಂದರ ಬಳಿ ಎಸೆದು ಹೋಗಿದ್ದಾರೆ.

ಕಲಾನ್ ಗ್ರಾಮದ ಬಳಿ ಅತ್ಯಾಚಾರ ಎಸಗಿದ ಬಳಿಕ ಆಕೆಯನ್ನು ಶಾಪಿಂಗ್ ಮಾಲ್ ಸಮೀಪ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಹೈಬೋವಲ್ ಗ್ರಾಮದ ನಿವಾಸಿಯಾಗಿರುವ ಮಹಿಳೆ ಮೆಹಂದಿ ಹಾಕುವ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಮದುವೆಯಾಗಿದೆ. ಮದುವೆ ಕಾರ್ಯಕ್ರಮವೊಂದರಲ್ಲಿ ಮೆಹಂದಿ ಹಚ್ಚಲು ಹೋಗಿದ್ದ ವೇಳೆಯಲ್ಲಿ ಘಟನೆ ನಡೆದಿದೆ.

ಸಂತ್ರಸ್ತೆ ತನ್ನ ಪತಿಗೆ ಮಾಹಿತಿ ನೀಡಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.