Sunday, September 20, 2026

BDA Apartments

ಟೆನಿಸ್ ಲೋಕಕ್ಕೆ ವಿದಾಯ ಹೇಳಿದ ಮರಿಯಾ ಶರಪೋವಾ BDA JK_Adv BDA Adv
Home Front Page ಟೆನಿಸ್ ಲೋಕಕ್ಕೆ ವಿದಾಯ ಹೇಳಿದ ಮರಿಯಾ ಶರಪೋವಾ

ಟೆನಿಸ್ ಲೋಕಕ್ಕೆ ವಿದಾಯ ಹೇಳಿದ ಮರಿಯಾ ಶರಪೋವಾ

ಪ್ಯಾರಿಸ್, ಫೆಬ್ರವರಿ 27, 2020 (www.justkannada.in): ಟೆನಿಸ್ ಲೋಕದ ತಾರೆ ಮರಿಯಾ ಶರಪೋವಾ ವೃತ್ತಿಪರ ಟೆನಿಸ್‌ಗೆ ಬುಧವಾರ ವಿದಾಯ ಘೋಷಿಸಿದ್ದಾರೆ.

2001ರಲ್ಲಿ ಪದಾರ್ಪಣೆ ಮಾಡಿದ್ದ ಅವರು ಐದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ರಷ್ಯಾದ ಶರಪೋವಾ 2004ರಲ್ಲಿಯೇ ವಿಂಬಲ್ಡನ್ ಪ್ರಶಸ್ತಿ ಜಯಿಸಿ ದಾಖಲೆ ಬರೆದಿದ್ದರು.

2005 ಅಗ್ರಶ್ರೇಯಾಂಕ ಕೂಡ ಗಳಿಸಿದ್ದರು. 2012ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಆದರೆ, 2016ರಲ್ಲಿ ನಿಷೇಧಿತ ಮದ್ದು ಮೆಲ್ಡೊನಿಯಂ ಸೇವನೆ ಆರೋಪದಲ್ಲಿ ಒಂದು ವರ್ಷದ ನಿಷೇಧ ಶಿಕ್ಷೆ ಅನುಭವಿಸಿದ್ದರು. 2017ರಲ್ಲಿ ಕಣಕ್ಕೆ ಮರಳಿದ್ದ ಅವರು ಹೆಚ್ಚು ಸಫಲರಾಗಿರಲಿಲ್ಲ.