ಮೈಸೂರಿನಲ್ಲಿ ಇಂದು ಮಂಗಳಮುಖಿಯರ ‘ತಲ್ಕಿ ನಾಟಕ’ ಉಚಿತ ಪ್ರದರ್ಶನ.

ಮೈಸೂರು,ಜುಲೈ,21,2023(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಇಂದು ಮಂಗಳಮುಖಿಯರೇ ರಚಿಸಿ ನಿರ್ದೇಶನ ಮಾಡಿರುವ ತಲ್ಕಿ ನಾಟಕ ಉಚಿತ ಪ್ರದರ್ಶನಗೊಳ್ಳಲಿದೆ.

ಮೈಸೂರಿನ ಮಂಗಳಮುಖಿ ಚಾಂದಿನಿ ಅಭಿನಯಿಸಿ, ಕತೆ ರಚನೆ ಮಾಡಿದ್ದು, ರಾಜ್ಯದ ವಿವಿಧ ಭಾಗಗಳನ್ನು 7 ಮಂದಿ ಮಂಗಳಮುಖಿಯರು ನಾಟಕದಲ್ಲಿ ಅಭಿನಯಿಸಲಿದ್ದಾರೆ. ನಗರದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಸಂಜೆ 6:30ಕ್ಕೆ ಪಯಣ ಎಂಬ ಮಂಗಳಮುಖಿಯರ ಸಂಸ್ಥೆಯಿಂದ ಈ ನಾಟಕ ಪ್ರದರ್ಶನವಾಗಲಿದ್ದು, ಮೈಸೂರಿನ ಜನತೆಗೆ ಉಚಿತವಾಗಿ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ.

ತಲ್ಕಿ ಎಂದರೆ ಮಂಗಳಮುಖಿಯರ ಭಾಷೆಯಲ್ಲಿ ಅವರದೇ ಆದ ಒಂದು ಊಟದ ಪದ್ಧತಿ. ಮೈಸೂರಿನಲ್ಲಿ ಮಂಗಳಮುಖಿಯರ ಜೀವನಧಾರಿತ ಕುರಿತ ಮೊದಲ ನಾಟಕ ಇದಾಗಿದೆ. ಐವತ್ತು ವರ್ಷ ಮೇಲ್ಪಟ್ಟ ಮಂಗಳಮುಖಿಯ ಅಭಿನಯಿಸುತ್ತಿದ್ದು . ಆಧ್ಯಾತ್ಮಿಕ ಚಿಂತಕ ಶಂಕರ್ ದೇವನೂರ್ ನಾಟಕ ಉದ್ಘಾಟನೆ ಮಾಡಲಿದ್ದಾರೆ.

Key words: Mangalamukhi-‘Talki Natak-free -performance – Mysore- today