Tuesday, September 22, 2026

BDA Apartments

ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಕ್ಕೆ ಸಿಂಗಾರಗೊಂಡಿರುವ ಮಂಡ್ಯ BDA JK_Adv BDA Adv
Home Front Page ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಕ್ಕೆ ಸಿಂಗಾರಗೊಂಡಿರುವ ಮಂಡ್ಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಕ್ಕೆ ಸಿಂಗಾರಗೊಂಡಿರುವ ಮಂಡ್ಯ

ಮೈಸೂರು ಮಾರ್ಚ್ 12, 2023 (www.justkannada.in): ಬೆಂಗಳೂರು-ಮೈಸೂರು ಹೆದ್ದಾರಿ ಉದ್ಪಾಟನೆಗೆ   ಸ್ವಲ್ಲ ಹೊತ್ತಿನಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಮಂಡ್ಯಕ್ಕೆ ಆಗಮಿಸಲಿದ್ದಾರೆ.

ಬೆಳಿಗ್ಗೆ 11.20 ಕ್ಕೆ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಆಗಮಿಸಿ  11.25 ಕ್ಕೆ ಪ್ರವಾಸಿಮಂದಿರ ವೃತ್ತದಿಂದ ನಂದ ಸರ್ಕಲ್ ರವರೆಗೆ  ರೋಡ್ ಶೋ ನಡೆಸಲಿದ್ದಾರೆ.  ನಂತರ11.40 ಕ್ಕೆ  ಒಟ್ಟು 8479 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 118 ಕಿ.ಮೀ ಉದ್ದದ  ಮೈಸೂರು-ಬೆಂಗಳೂರು ದಶಪಥ ರಸ್ತೆಯನ್ನು ಹನಕೆರೆಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.

ಮಧ್ಯಾಹ್ನ 12.15 ರಿಂದ 01.15 ರವರೆಗೆ  ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಂಡು ರೂ.4128.92 ಕೋಟಿ ವೆಚ್ಚದ ಒಟ್ಟು 92.33 ಕಿ.ಮೀ ಉದ್ದದ 4 ಪಥದ ಮೈಸೂರು – ಕುಶಾಲನಗರ 4 ಪ್ಯಾಕೇಜ್‌ಗಳ ಹೆದ್ದಾರಿ ಕಾಮಗಾರಿಗೆ  ಭೂಮಿಪೂಜೆ ಮಾಡಲಿದ್ದಾರೆ. 12.40 ರಿಂದ 1.15 ರವರೆಗೆ ಪ್ರಧಾನ ಮಂತ್ರಿಗಳು ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 1.15 ಗಂಟೆಗೆ ಮಂಡ್ಯದಿಂದ ನಿರ್ಗಮಿಸಲಿದ್ದಾರೆ.