ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ರೋಹನ್, ಅಮೂಲ್ಯ, ನಿಕಿತಾಗೆ ಪ್ರಶಸ್ತಿ

ಮೈಸೂರು, ಮಾರ್ಚ್ 10, 2023 (justkannada.in): ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ರೋಹನ್ ವಿ ಗಂಗಾಡ್ಕರ್, ಅಮೂಲ್ಯ ಮತ್ತು ನಿಕಿತಾ ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆ – 2023ರ ವಿಜೇತರಾಗಿದ್ದಾರೆ.

ರೋಹನ್ ವಿ ಗಂಗಡ್ಕರ್ ಮೈಸೂರಿನ ಹಿರಿಯ ವಕೀಲರು ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆಯ ಗೌರವ ಸಂಪಾದಕರಾದ ಹೆಚ್ ಎನ್ ವೆಂಕಟೇಶ್ ಪುತ್ರ. ಶನಿವಾರ ಬೆಂಗಳೂರಿನಲ್ಲಿ ರೇವಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ಆಯೋಜಿಸಿದ್ದ ಮೂರು ದಿನಗಳ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 27 ತಂಡಗಳು ಭಾಗವಹಿಸಿದ್ದವು.

ವಿಜೇತರಾದ ರೋಹನ್ ವಿ ಗಂಗಾಡ್ಕರ್, ಅಮೂಲ್ಯ ಮತ್ತು ನಿಕಿತಾ ಟ್ರೋಫಿ ಮತ್ತು 20000 ರೂ ನಗದು ಬಹುಮಾನವನ್ನು ಪಡೆದಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಮತ್ತು ನ್ಯಾಯಮೂರ್ತಿ ಇ ಸೀತಾರಾಮಯ್ಯ ಇಂದಿರೇಶ್ ಅವರು ಬಹುಮಾನ ವಿತರಣೆ ಮಾಡಿದರು.

ಈ ಸ್ಪರ್ಧೆಯಲ್ಲಿ ಸ್ಕೂಲ್ ಆಫ್ ಎಕ್ಸಲೆನ್ಸ್ ಇನ್ ಲಾ ಚೆನ್ನೈ ವಿದ್ಯಾರ್ಥಿಗಳು ಎರಡನೇ ಸ್ಥಾನ ಪಡೆದಿದ್ದಾರೆ.