ಮಲ್ಲಿಕಾರ್ಜುನ ಖರ್ಗೆ ಸೀನಿಯರ್ ಮೋಸ್ಟ್ ದಲಿತ ಲೀಡರ್: ಅವರು ಸಿಎಂ ಆಗೋದ್ರಲ್ಲಿ ತಪ್ಪೇನಿಲ್ಲ- ಆರ್. ಧ್ರುವನಾರಾಯಣ್.

ಮೈಸೂರು,ಜುಲೈ,3,2021(www.justkannada.in): ನಮ್ಮ‌ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಸೀನಿಯರ್ ಮೋಸ್ಟ್ ದಲಿತ ಲೀಡರ್. ಅವರು ಸಿಎಂ ಆಗೋದ್ರಲ್ಲಿ ತಪ್ಪೇನಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ತಿಳಿಸಿದ್ದಾರೆ.jk

ಕಾಂಗ್ರೆಸ್ ನಲ್ಲಿ ದಲಿತ ಸಿಎಂ‌ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಲ್ಲಿಕಾರ್ಜುನ ಖರ್ಗೆ. ಮೋಸ್ಟ್ ಸೀನಿಯರ್ ಲೀಡರ್. ಎಂದೋ‌ ಅವರು ಮುಖ್ಯಮಂತ್ರಿ ಆಗಬೇಕಿತ್ತು. ಆ ಸಂದರ್ಭದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ನಾವಿನ್ನೂ ಜೂನಿಯರ್. ನಾವು ಎಂದೂ ಆ ಸ್ಥಾನಕೆ ಆಸೆಪಟ್ಟವನಲ್ಲ. ಪಕ್ಷದ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ದಲಿತರಿಗೆ ಕಾಂಗ್ರೆಸ್ ಪಕ್ಷ ಸಾಕಷ್ಟು ಸ್ಥಾನ ಮಾನ ನೀಡಿದೆ. ಬೇರೆ ಪಕ್ಷಗಳಿಗಿಂತ ದಲಿತರಿಗೆ ಹೆಚ್ಚು ಸ್ಥಾನಮಾನ ಸಿಕ್ಕಿರುವುದ ಕಾಂಗ್ರೆಸ್ ಪಕ್ಷದಲ್ಲಿ. ಬೇರೆ ಪಕ್ಷದಲ್ಲೂ ಈ ಸ್ಥಾನಮಾನ ನೀಡಿಲ್ಲ ಎಂದು ಹೇಳಿದರು.

ಕೆಲ ಶಾಸಕರುಗಳು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಜಿಡಿಎಸ್ , ಬಿಜೆಪಿ ಕೆಲ ಶಾಸಕರ ಪಕ್ಷಕ್ಕೆ ಬರುವ ಪ್ರಯತ್ನದಲ್ಲಿ ಇದ್ದಾರೆ. ಕೆಲ ಶಾಸಕರುಗಳು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ನಾನು ಯಾರು ಎಂಬುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಬೇರೆ ಪಕ್ಷದ ಶಾಸಕರುಗಳ ಸೇರ್ಪಡೆ ಬಗ್ಗೆ ಒಂದು ಸಮಿತಿ ಇದೆ. ಅದನ್ನು ಸಮಿತಿ ತೀರ್ಮಾನ ಮಾಡುತ್ತದೆ ಎಂದು ಧ್ರುವನಾರಾಯಣ್ ತಿಳಿಸಿದರು.

ಜಿಲ್ಲಾ ಪಂ‌ಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ದತೆ ನಡೆಸಿದೆ. ಜಿಪಂ ತಾಪಂ ಚುನಾವಣೆ ಮೀಸಲಾತಿ ಪ್ರಕಟ ಗೊಂಡಿದೆ. ನಾವು ಚುನಾವಣೆಗೆ ಸಿದ್ದರಿದ್ದೀವಿ. ಕೋವಿಡ್ ಸಂದರ್ಭದಲ್ಲಿ ಪಕ್ಷ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಕಳೆದ ಗ್ರಾಪಂ ಚುನಾವಣೆ ಕಾಂಗ್ರೆಸ್ ಗೆ ಉತ್ತಮ ಫಲಿತಾಂಶ ಬಂದಿದೆ. ಮೈಸೂರು ಚಾಮರಾಜ ನಗರದಲ್ಲಿ ಪಕ್ಷ ಶಕ್ತಿಯುತವಾಗಿದೆ. ಸ್ವತಃ ಮುಖ್ಯಮಂತ್ರಿ ಬಿಎಸ್ ವೈ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ ನಾಲ್ಕು ಹೆಚ್ಚೆ ಹಿಂದಿದ್ದೇವೆ ಎಂದು ಅವರೇ ಹೇಳಿದ್ದಾರೆ. ಹಾಗೂ ಪಕ್ಷ ಚುನಾವಣೆ ನಡೆದು ಎದುರಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಚುಮಾವಣೆಗೆ ವೇಳಾಪಟ್ಟಿ ಇನ್ನೂ ಪ್ರಕಟ ಆಗಿಲ್ಲ. ಪಕ್ಷ ಎಲ್ಲಾ ಹಂತದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ‌ ಕಾರ್ಯಾಧ್ಯಕ್ಷ ಧ್ರುವನಾರಾಯಣ್  ತಿಳಿಸಿದರು.

Key words: Mallikarjuna Kharge – Senior Most -Dalit Leader-CM –KPCC-R. Dhruvanarayan-mysore