ಬೆಂಗಳೂರಿನಲ್ಲಿ ಮುಂದುವರೆದ ಕಾವೇರಿ ಹೋರಾಟ: ರಸ್ತೆ ತಡೆದು ಪ್ರತಿಭಟನೆ, ಆಕ್ರೋಶ.

ಬೆಂಗಳೂರು,ಸೆಪ್ಟಂಬರ್,25,2023(www.justkannada.in): ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಕುಡಿಯುವ ನೀರಿಗೂ ಕುಡಿಯುವ ನೀರಿಗೂ ಹಾಹಾಕಾರ ಪಡುವ ಸ್ಥಿತಿ ಉಂಟಾಗಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ವಿರುದ್ಧ ಹೋರಾಟ ಮುಂದುವರೆದಿದೆ.

ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ಇಂದು ಗಾಳಿ ಅಂಜನೇಯ ದೇಗುಲದ ಬಳಿ ಕನ್ನಡಪರ ಸಂಘಟನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಮೈಸೂರು ರಸ್ತೆ ತಡೆದು ರಸ್ತೆ ಮೇಲೆ ಕುಳಿತು ಕಾವೇರಿ ಉಳಿಸಿ   ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದರು.

ಕರವೇ ಸ್ವಾಭಿಮಾನಿ ಸೇನೆಯಿಂದ ಇಂದು ಪ್ರತಿಭಟನೆ  ನಡೆಯಲಿದೆ. ಕೆಲಹೊತ್ತಿನಲ್ಲಿ ಮೌರ್ಯ ಸರ್ಕಲ್ ನಿಂದ ರ್ಯಾಲಿ ಆರಂಭವಾಗಲಿದ್ದು,  ರೈಲ್ವೆ ಸ್ಟೇಷನ್ ಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

Key words: Continued -caveri fight- Bengaluru- Road blocking- protest