ಎಚ್.ಡಿ ಕೋಟೆ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಅನೀಲ್ ಚಿಕ್ಕಮಾದು ಭೇಟಿ, ಪರಿಶೀಲನೆ…

ಮೈಸೂರು,ಸೆ,17,2019(www.justkannada.in):  ಹಾಸ್ಟೆಲ್ ನಲ್ಲಿ ಶುಚಿತ್ವ ಕಾಪಾಡುತ್ತಿಲ್ಲ ಎನ್ನುವ  ಆರೋಪ  ಕೇಳಿ ಬರುತ್ತಿರುವ ಹಿನ್ನೆಲೆ ಮೈಸೂರಿನ ಎಚ್ ಡಿ ಕೋಟೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಅನೀಲ್  ಚಿಕ್ಕಮಾದು ಭೇಟಿ ನೀಡಿ ಪರಿಶೀಲಿಸಿದರು. ..

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಶಾಸಕ ಅನೀಲ್ ಚಿಕ್ಕಮಾದು ಶುಚಿತ್ವ ಪರಿಶೀಲಿಸಿದರು. ಶಾಸಕರಿಗೆ ಸ್ಥಳೀಯ ಮುಖಂಡರಾದ ನರಸಿಂಹ ಮೂರ್ತಿ, ಅಂಕನಾಯ್ಕ , ಶಶಿ ಸಾಥ್ ನೀಡಿದರು. ಮಕ್ಕಳಿಗೆ ಉತ್ತಮ ಆಹಾರ ನೀಡಬೇಕು. ಆರೋಗ್ಯದ ದೃಷ್ಟಿಯಿಂದ ಶುಚಿತ್ವದ ಕಡೆ ಗಮನ ಹರಿಸಿವಂತೆ ಶಾಸಕ ಅನಿಲ್ ಚಿಕ್ಕಮಾದು ಸೂಚನೆ ನೀಡಿದರು. ಹಾಗೆಯೇ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಾಜರಾಗುವಂತೆ ಖಡಕ್ ಸೂಚನೆ ನೀಡಿದರು.

Key words: MLA Anil chikkamadu -visits – HD kote-hostel