Monday, September 14, 2026

BDA Apartments

ಹೊಸ ವಿಧೇಯಕ ಕಣ್ಣೊರೆಸುವ ತಂತ್ರ: ಮೋದಿ, ಶಾ ಮೌನವೇಕೆ? ಖರ್ಗೆ ವಾಗ್ದಾಳಿ BDA JK_Adv BDA Adv
Home Front Page ಹೊಸ ವಿಧೇಯಕ ಕಣ್ಣೊರೆಸುವ ತಂತ್ರ: ಮೋದಿ, ಶಾ ಮೌನವೇಕೆ? ಖರ್ಗೆ ವಾಗ್ದಾಳಿ

ಹೊಸ ವಿಧೇಯಕ ಕಣ್ಣೊರೆಸುವ ತಂತ್ರ: ಮೋದಿ, ಶಾ ಮೌನವೇಕೆ? ಖರ್ಗೆ ವಾಗ್ದಾಳಿ

ನವದೆಹಲಿ,ಜುಲೈ,30,2026 (www.justkannada.in):  ಸಾರ್ವಜನಿಕ ಪರೀಕ್ಷೆಗಳ (ಅಕ್ರಮಗಳ ತಡೆ) ತಿದ್ದುಪಡಿ ಮಸೂದೆ–2026 ಕಣ್ಣೊರೆಸುವ ತಂತ್ರವಾಗಿದೆ. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ವಿಚಾರದಲ್ಲಿ ಪ್ರಧಾನಿ ಮೋದಿ, ಕೇಂದ್ರಗೃಹ ಸಚಿವ ಅಮಿತ್ ಶಾ ಏಕೆ ಮೌನವಹಿಸಿದ್ದಾರೆ ಎಂದು ರಾಜ್ಯಸಭೆ ವಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಸಾರ್ವಜನಿಕ ಪರೀಕ್ಷೆಗಳ (ಅಕ್ರಮಗಳ ತಡೆ) ತಿದ್ದುಪಡಿ ಮಸೂದೆ–2026 ಅನ್ನು ಸಂಸತ್ ನಲ್ಲಿ ಮಂಡಿಸಲಾಗಿ‍ದ್ದು ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಟಾಸ್ಕ್ ಫೋರ್ಸ್ ಹೊಸ ಬಿಲ್ ನಿಂದ ಯಾವುದೇ ಪ್ರಯೋಜವಾಗಲ್ಲ. 2024ರ ಚುನಾವಣೆ ದೃಷ್ಠಿಯಲ್ಲಿರುಸಿಕೊಂಡು ಬಿಲ್ ತರಲಾಗಿತ್ತು ಹೊಸ ವಿಧೇಯಕ ಜಾರಿ ಕಣ್ಣೋರೆಸುವ ತಂತ್ರ ಎಂದರು.ಹೊಸ ವಿಧೇಯಕ ಕಣ್ಣೊರೆಸುವ ತಂತ್ರ modi

ಸಾರ್ವಜನಿಕ ಪರೀಕ್ಷೆ ಮಸೂದೆಯಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಮಸೂದೆಯಲ್ಲಿ ಕೇವಲ ಅಂಕಿ ಅಂಶಗಳಿವೆ.  ಬಿಹಾರ ಪ್ರತಿಭಟನೆಯಲ್ಲಿ  ಎಕೆ 47 ಗನ್ ಬಳಸಲಾಗಿದೆ.  ಪ್ರಶ್ನೆ ಪತ್ರಿಕೆ ಸೋರಿಕೆ  ವಿರೋಧಿಸಿ ಪ್ರತಿಭಟನೆ ವೇಳೆ ಬಳಕೆ ಮಾಡಲಾಗಿದೆ.  ಎಕೆ 47 ಗನ್ ಬಳಕ್ಕೆ ಬಗ್ಗೆ ಸ್ಪಷ್ಟನೆ ನೀಡಬೇಕು. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯದ ಹೊಣೆಯನ್ನು ಅಮಿತ್ ಶಾ ಹೊತ್ತಿಕೊಳ್ಳಲಿ.  ಮೋದಿ, ಅಮಿತ್ ಶಾ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.ಮೋದಿ jk02_new jk02 new

Key words: New bill, Parliament, PM Modi, Amith Shah, Mallikarjuna Kharge