ಧನ್ಕರ್ ರಾಜೀನಾಮೆ ಹಿಂದೆ ಏನೋ ಅಡಗಿದೆ- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ,ಜುಲೈ,23,2025 (www.justkannada.in):  ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನ್ಕರ್ ರಾಜೀನಾಮೆ ಹಿಂದೆ ಏನೋ ಅಡಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಗದೀಪ್ ಧನ್ಕರ್ ರಾಜೀನಾಮೆ ಯಾಕೆ ಕೊಟ್ಟರು. ಈ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು. ಧನ್ಕರ್ ಅವರ ಆರೋಗ್ಯ ಚೆನ್ನಾಗಿ ಇದೆ. ಹೀಗಿರುವಾಗ ಧನ್ಕರ್ ರಾಜೀನಾಮೆ ನೀಡಿದ್ದು ಯಾಕೆ..? ಎಂದು ಪ್ರಶ್ನಿಸಿದರು.

ಧನ್ಕರ್ ಅವರು ಆರ್ ಎಸ್ ಎಸ್ ಗೆ ತುಂಬಾ ನಿಷ್ಠೆಯಿಂದ ಇದ್ದರು.   ಹೀಗಿರುವಾಗ ಅವರು ಯಾಕೆ ರಾಜೀನಾಮೆ ಕೊಟ್ಟರು.  ಇದರ ಹಿಂದೆ ಯಾರಿದ್ದಾರೆ ಅಂತಾ ದೇಶಕ್ಕೆ ಕೇಂದ್ರ ಸರ್ಕಾರ ತಿಳಿಸಬೇಕು  ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.vtu

Key words: Jagadeep Dhankar, resignation, AICC President, Mallikarjun Kharge