ದೇಶದ ಆರ್ಥಿಕ ಪುನಶ್ಚೇತನಕ್ಕಾಗಿ ಆರ್ಬಿಐನಿಂದ ಪ್ರಮುಖ ಘೋಷಣೆ

ನವದೆಹಲಿ, 17, 2020 (www.justkannada.im): ಲಾಕ್ ಡೌನ್ ನಿಂದ ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಸರಿದಾರಿಗೆ ಕೊಂಡೊಯ್ಯಲು ಆರ್ ಬಿಐ ಕೆಲ ಘೋಷಣೆ ಮಾಡಿದೆ.

 ಆರ್ಥಿಕ ಪುನಶ್ಚೇತನಕ್ಕಾಗಿ ಆರ್ಬಿಐ ಪ್ರಮುಖ ಘೋಷಣೆಗಳು ಇಂತಿವೆ
1. ಸಮರ್ಪಕ ಹಣದ ಹರಿವಿನ ನಿರ್ವಹಣೆ ಮತ್ತು ಬ್ಯಾಂಕುಗಳಿಗೆ ಹಣದ ಕೊರತೆಯಾಗದಂತೆ ಎಚ್ಚರಿಕೆ
2. ಎಲ್ಲಾ ಬ್ಯಾಂಕುಗಳಿಗೆ ಜಿಡಿಪಿ ಶೇ.3.2 ರಷ್ಟು ಹಣದ ಪೂರೈಕೆ.
3. ಶೇ.91 ರಷ್ಟು ಎಟಿಎಂ ಗಳ ಕಾರ್ಯ ನಿರ್ವಹಣೆ.
4. ಆಹಾರಧಾನ್ಯಗಳಿಗೆ ಕೊರತೆ ಇಲ್ಲದಂತೆ ನೋಡಿಕೊಳ್ಳುವುದು.
5. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ 50,000 ಕೋಟಿ ಆರ್ಥಿಕ ನೆರವು ಮೀಸಲು
6. ನಬಾರ್ಡ್‌ಗೆ (NABARD) 25,000 ಸಾವಿರ ಕೋಟಿ ಆರ್ಥಿಕ ನೆರವು ಮೀಸಲು.
7. ಸಣ್ಣ ಕೈಗಾರಿಕೆ ಅಭಿವರದ್ಧಿ ನಿಗಮ ಕ್ಕೆ (SIDBI) ಹೆಚ್ಚುವರಿ 15,000 ಕೋಟಿ ಆರ್ಥಿಕ ನೆರವು ಮೀಸಲು.
8. ರಿವರ್ಸ್ ರಿಪೋ ದರ 25 ಬೇಸಿಸ್ ಪಾಯಿಂಟ್ ಇಳಿಕೆ ಮಾಡಿದ್ದು ಈ ಮೂಲಕ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಸಾಲ ಸೌಲಭ್ಯ.
9.ಮೂರು ತಿಂಗಳ ಕಾಲ ಪಿಎನ್‌ಎ ನಿಯಮ (ಪಡೆದಿರುವ ಸಾಲ ಮರುಪಾವತಿ) ಅನ್ವಯಿಸುವುದಿಲ್ಲ.