ಇಂದು 11ಗಂಟೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ, ಕ್ರೀಡಾ ತಾರೆಗಳ ಸಮಾಗಮ

ಬೆಂಗಳೂರು, ಏಪ್ರಿಲ್ 17, 2020 (www.justkannada.in): ನಾಳೆ ಸಿನಿಮಾ ಹಾಗೂ ಕ್ರೀಡಾ ತಾರೆಯರು ಲೈವ್ ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ…
ಹೌದು.
ಕನ್ನಡ ಸಂಸ್ಕೃತಿ ಸಚಿವರಾದ ಶ್ರೀ ಸಿ ಟಿ ರವಿ ಅವರ ನೇತೃತ್ವದಲ್ಲಿ ಕೋವಿಡ್‌-19 ಕುರಿತು ಸಾರ್ವಜನಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಿದ್ದಾರೆ. ಏಪ್ರಿಲ್‌ 17ರಂದು ಬೆಳಗ್ಗೆ 11 ಗಂಟೆಯಿಂದ 12ವರೆಗೆ ನಾಡಿನ 20ಕ್ಕೂ ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರದ ಜನಪ್ರಿಯ ತಾರೆಯೊಂದಿಗೆ ಯುವಜನ ಸೇವಾ ಕ್ರೀಡಾ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ನಡೆಯಲಿದೆ.

ಇಲಾಖೆಯ ಅಧಿಕಾರಿಗಳು ಸೇರಿದಂತೆ 22 ತಾರೆಯರು #ನಮ್ಮಮನೆನನ್ನಸುರಕ್ಷೆ ಕುರಿತು ಮಾತನಾಡಲಿದ್ದಾರೆ.
ಸಿನಿಮಾ ಕ್ಷೇತ್ರದಿಂದ ಪುನೀತ್‌ ರಾಜ್‌ಕುಮಾರ್, ಐಂದ್ರಿತಾ ರೇ, ದಿಗಂತ್‌, ಕ್ರೀಡಾ ಕ್ಷೇತ್ರದಿಂದ ಜಾವಗಲ್‌ ಶ್ರೀನಾಥ್‌, ವೆಂಕಟೇಶ್‌ ಪ್ರಸಾದ್‌, ಅಶ್ವಿನಿ ಪೊನ್ನಪ್ಪ, ರೋಹನ್‌ ಬೋಪಣ್ಣ ಮುಂತಾದವರು ಮಾತನಾಡಲಿದ್ದಾರೆ.
ಯುವ ಜನ ಸೇವಾ ಕ್ರೀಡಾ ಇಲಾಖೆಯು ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಜಿ ಕಲ್ಪನಾ, ಆಯುಕ್ತರಾದ ಕೆ ಶ್ರೀನಿವಾಸ್‌ ಅವರೂ ನೇರ ಪ್ರಸಾರದಲ್ಲಿ ಕೋವಿಡ್‌ 19 ಜಾಗೃತಿ ಕುರಿತು ಮಾತನಾಡುವರು.
ನೇರಪ್ರಸಾರವೂ ಕೆಳಕಂಡ ಸಾಮಾಜಿಕ ಜಾಲತಾಣಗಳಲ್ಲಿ, ದಿನಾಂಕ 17.04.2020ರಂದು ಬೆಳಗ್ಗೆ 11 ಗಂಟೆಯಿಂದ 12 ಗಂಟೆವರೆಗೆ ಪ್ರಸಾರವಾಗಲಿದ್ದು, ನೀವೆಲ್ಲರೂ ನೇರ ಪ್ರಸಾರ ವೀಕ್ಷಿಸಿ, ಕಾರ್ಯಕ್ರಮದ ಲಾಭ ಪಡೆದುಕೊಳ್ಳಬೇಕು. ಈ ಮಾಹಿತಿಯನ್ನು ಸಾರ್ವಜನಿಕರಲ್ಲಿ ಹೆಚ್ಚು ಹೆಚ್ಚು ಹಂಚಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಂದು ಕಣಜದ ಸಮನ್ವಯಕಾರರಾದ ರಮೇಶ್‌ ಚಂದ್ರಶೇಖರ ಮನವಿ ಮಾಡಿಕೊಂಡಿದ್ದಾರೆ.
ನೇರ ಪ್ರಸಾರವಾಗುವ ಜಾಲತಾಣಗಳ ಕೊಂಡಿಗಳು:
facebook.com/yesd.kar

instagram.com/yesd.kar

youtube.com/c/yesdkar