ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಿಸದ ಹಿನ್ನೆಲೆ: ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ವಿರುದ್ದ ಅ.13ರಂದು  ವಿನೂತನ ಪ್ರತಿಭಟನೆ…

ಮೈಸೂರು,ಅ,11,2019(www.justkannada.in): ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನು ನಿರ್ಮಿಸದ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಭಾನುವಾರ  ಮೈಸೂರು ಮಹಾನಗರ ಪಾಲಿಕೆ ಮುಂದೆ ಕಪ್ಪು ಪಟ್ಟಿ ಧರಿಸಿ ವಾಲ್ಮೀಕಿ ಜಯಂತಿ ಆಚರಿಸುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷ ದೇವರಾಜ್ ಟಿ ಕಾಟೂರು ಹೇಳಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷ ದೇವರಾಜ್ ಟಿ ಕಾಟೂರು, ಬೇಡ ಜನಾಂಗಕ್ಕೆ ಸೇರಿದ ಮಹರ್ಷಿ ವಾಲ್ಮೀಕಿ ಬರೆದ ಮಹಾಕಾವ್ಯ ರಾಮಾಯಣ ಮತ್ತು ವಾಲ್ಮೀಕಿರವರನ್ನು ಮಹಾಕವಿಯೆಂದು ನಮ್ಮ ದೇಶ ಮತ್ತು ಜಗತ್ತು ಒಪ್ಪಿಕೊಂಡಿದೆ. ನಗರ ಪಾಲಿಕೆ ಮುಂದೆ ಹಲವಾರ ಬಾರಿ ಪ್ರತಿಭಟನೆ ನಡೆಸಿದರೂ ಕೂಡ ಯಾವುದೆ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಿಸಬೇಕೆಂದು ಆಗ್ರಹಿಸಿ ಅಕ್ಟೋಬರ್ 13 ರಂದು ನಗರಪಾಲಿಕೆ ಮುಂಭಾಗ ಕಪ್ಪು ಪಟ್ಟಿ ಧರಿಸಿ ಜಯಂತಿ ಆಚರಣೆ ಮಾಡುವ ಮೂಲಕ  ಪ್ರತಿಭಟನೆ ಮಾಡತ್ತೇವೆ. ಪ್ರತಿಭಟನೆಯಲ್ಲಿ ಶಾಸಕರು , ಮಾಜಿ ಶಾಸಕರು , ಸಾಹಿತಿಗಳು ಭಾಗವಹಿಸುತ್ತಿದ್ದಾರೆ ಎಂದು ಎಂದ ದೇವರಾಜ್ ತಿಳಿಸಿದರು.

Key words: Maharishi Valmiki –statue- build- protest -against -Mysore city corporation