Sunday, September 6, 2026

BDA Apartments

Home Front Page ಮೈತ್ರಿ ಸರಕಾರದ ನೂತನ ಸಚಿವರಿಗೆ ನಾಳೆ ಖಾತೆ ಹಂಚಿಕೆ ಸಾಧ್ಯತೆ

ಮೈತ್ರಿ ಸರಕಾರದ ನೂತನ ಸಚಿವರಿಗೆ ನಾಳೆ ಖಾತೆ ಹಂಚಿಕೆ ಸಾಧ್ಯತೆ

ಬೆಂಗಳೂರು, ಜೂನ್ 23,2019 (www.justkannada.in):  ಮೈತ್ರಿ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರಾದ ಆರ್.ಶಂಕರ್ ಮತ್ತು ಎಚ್. ನಾಗೇಶ್ ಅವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗುತ್ತದೆ.

ಸೋಮವಾರ ರಾಜ್ಯಪಾಲ ವಿ.ಆರ್.ವಾಲಾ ಅವರಿಂದ ನೂತನ ಸಚಿವರ ಖಾತೆಗಳ ಪಟ್ಟಿಗೆ ಅಂಕಿತ ಬೀಳಲಿದೆ. ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಅವರ ನಿಧನದಿಂದ ತೆರವಾಗಿರುವ ಪೌರಾಡಳಿತ ಇಲಾಖೆಯ ಜವಾಬ್ದಾರಿಯನ್ನು ಆರ್. ಶಂಕರ್ ಅವರಿಗೆ ವಹಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇನ್ನು ಬಹಳ ದಿನಗಳಿಂದ ಸಚಿವರಿಲ್ಲದೇ ಉಳಿದುಕೊಂಡಿರುವ ಶಿಕ್ಷಣ ಇಲಾಖೆಗೆ ಎಚ್. ನಾಗೇಶ್ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ.