ಇನ್ಮುಂದೆ ಭಾನುವಾರವೂ ಮಾದಪ್ಪನ ದರ್ಶನಕ್ಕೆ ಅವಕಾಶ: ಚಾಮರಾಜನಗರ ಡಿಸಿ ಆದೇಶ

ಚಾಮರಾಜನಗರ, ಆಗಸ್ಟ್ 02, 2020 (www.justkannada.in): ಇನ್ನು ಮುಂದೆ ಭಕ್ತಾಧಿಗಳಿಗೆ ಭಾನುವಾರವೂ ಮಾದಪ್ಪನ ದರ್ಶನ ಇರಲಿದೆ. ಭಕ್ತರು ನಿತ್ಯ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ದರ್ಶನ ಪಡೆಯಬಹುದು.

ಕೊರೊನಾ ಮುನ್ನೆಚ್ಚರಿಕೆಯಾಗಿ ಜಿಲ್ಲೆಯಾದ್ಯಂತ ಜಾರಿಗೊಳಿಸಿದ್ದ ಸಂಜೆ 4 ರಿಂದ ಬೆಳಗ್ಗೆ 6 ರವರೆಗೆ ಲಾಕ್ ಡೌನ್ ಚಾಮರಾಜನಗರ ಡಿಸಿ ಡಾ. ಎಂ.ಆರ್.ರವಿ ತೆರವುಗೊಳಿಸಿದ್ದಾರೆ.

ಇನ್ನು ಹೋಂ ಕ್ವಾರಂಟೈನ್ ನಿರ್ಗಾವಣೆಯಲ್ಲಿರಬೇಕಾದವರು ನಿಗದಿತ ಅವಧಿಯ ನಿಯಮ ಉಲ್ಲಂಘಿಸಿ ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಎಫ್ ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.