ಮಾಜಿ ಶಾಸಕ ಐವಾನ್ ಡಿಸೋಜಾಗೆ ಕೊರೊನಾ ಸೋಂಕು: ಯು.ಟಿ.ಖಾದರ್ ಹೋಂ ಕ್ವಾರಂಟೈನ್

ಮಂಗಳೂರು, ಆಗಸ್ಟ್ 02, 2020 (www.justkannada.in): ಕಾಂಗ್ರೆಸ್ ಮಾಜಿ ಶಾಸಕ ಐವಾನ್ ಡಿಸೋಜಾ ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಅವರು ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಯು.ಟಿ.ಖಾದರ್, ಮಾಜಿ ಶಾಸಕ ಐವನ್ ಡಿಸೋಜಾ ಹಾಗೂ ಲಕ್ಷಾಂತರ ಮಂದಿ ಕೋವಿಡ್ ಸೋಂಕಿತರಾಗಿರಾಗಿದ್ದಾರೆ. ಇವರೆಲ್ಲರೂ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಐವನ್ ಡಿಸೋಜಾ ಅವರ ಜೊತೆ ಪ್ರಾಥಮಿಕ‌ ಸಂಪರ್ಕದಲ್ಲಿದ್ದ ಕಾರಣ ನಾನು ಕೆಲ‌ವು ದಿನಗಳ ಕಾಲ ಸ್ವಯಂ‌ ನಿರ್ಬಂಧ ಹಾಕಿಕೊಂಡಿದ್ದೇನೆ ಎಂದು ಹೇಳಿದ್ದಾರೆ.  ಜನ ಸಾಮಾನ್ಯರ ಸೇವೆಗೆ ದೂರವಾಣಿ ಮೂಲಕ ‌ ಲಭ್ಯವಿದ್ದು ಅಗತ್ಯವಿದ್ದಲ್ಲಿ ನೇರವಾಗಿ ದೂರವಾಣಿ ಮೂಲಕ ನನ್ನನ್ನ ಎಂದಿನಂತೆ ಸಂಪರ್ಕಿಸಬಹುದಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.