ಕೊರೊನಾ ವೈರಸ್ ಸಾಂಕ್ರಾಮಿಕ ಸುದೀರ್ಘ ಅವಧಿಯದ್ದು…: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಮುಂಬೈ, ಆಗಸ್ಟ್ 02, 2020 (www.justkannada.in): ಕೊರೊನಾ ವೈರಸ್ ಸಾಂಕ್ರಾಮಿಕ ಸುದೀರ್ಘ ಅವಧಿಯದ್ದಾಗಿರುವ ನಿರೀಕ್ಷೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಈ ವೈರಸ್ ಸೋಂಕು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಉಂಟುಮಾಡಿದ ಆರು ತಿಂಗಳ ಬಳಿಕ ನಡೆದ ತುರ್ತು ಸಮಿತಿ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಸಾಂಕ್ರಾಮಿಕ ಸುಧೀರ್ಘ ಅವಧಿಯದ್ದಾಗಿರುವ ನಿರೀಕ್ಷೆ ಇದ್ದು, ದೇಶಗಳ ಮೇಲಿರುವ ಸಾಮಾಜಿಕ, ಆರ್ಥಿಕ ಒತ್ತಡದಿಂದಾಗಿ ಸ್ಪಂದನೆ ನೀರಸವಾಗಲಿದೆ ಎಂದು ಎಚ್ಚರಿಸಿದೆ.

ಕಳೆದ ಜನವರಿ 30ರಂದು ಕೊರೋನ ವೈರಸ್ ಸಾಂಕ್ರಾಮಿಕವನ್ನು ಅಂತರ್ ರಾಷ್ಟ್ರೀಯ ಕಳವಳದ ತುರ್ತು ಆರೋಗ್ಯ ಪರಿಸ್ಥಿತಿ ಎಂದು ಘೋಷಿಸಿದ ಬಳಿಕ ಕೊರೋನ ವೈರಸ್ ಸಾಂಕ್ರಾಮಿಕದ ಬಗ್ಗೆ ಸಮಿತಿ ನಾಲ್ಕನೇ ಸಭೆ ನಡೆಸಿದೆ.