Wednesday, September 16, 2026

BDA Apartments

ಕೋರ್ಟ್ ರದ್ದು ಪಡಿಸಿದೆ ಸಮನ್ಸ್ “ ಇಡಿ” , ಇನ್ನಾದರೂ ಅಪ ಪ್ರಚಾರ ಬಿಡಿ : ಎಂ.ಲಕ್...
Home Front Page ಕೋರ್ಟ್ ರದ್ದು ಪಡಿಸಿದೆ ಸಮನ್ಸ್ “ ಇಡಿ” , ಇನ್ನಾದರೂ ಅಪ ಪ್ರಚಾರ ಬಿಡಿ :...

ಕೋರ್ಟ್ ರದ್ದು ಪಡಿಸಿದೆ ಸಮನ್ಸ್ “ ಇಡಿ” , ಇನ್ನಾದರೂ ಅಪ ಪ್ರಚಾರ ಬಿಡಿ : ಎಂ.ಲಕ್ಷ್ಮಣ್

 

ಮೈಸೂರು, ಮಾ.07,2025:  “ ಮುಡಾ” ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ  ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಗೆ  ಇಡಿ ಸಮನ್ಸ್  . ಹೈಕೋರ್ಟ್ ನ್ಯಾ‌ಯಮೂರ್ತಿ  ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ “ ಇಡಿ ಸಮನ್ಸ್ “ ರದ್ದು ಮಾಡಿರುವುದು ಸ್ವಾಗತರ್ಹ.

ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಸುದ್ದಿ ಗೋಷ್ಠಿ.

ಇಡಿ ತನಿಖೆಗೆ ಹಾಜರಾಗಬೇಕು ಎಂದು ಸಮನ್ಸ್ ಜಾರಿ ಮಾಡಿದ್ದ ಆದೇಶವನ್ನೇ ಕೋರ್ಟ್ ಈಗ ರದ್ದು ಮಾಡಿದೆ. ಆರಂಭದಿಂದಲೂ ಈ ಪ್ರಕರಣದಲ್ಲಿ ಸಿಎಂ ಪಾತ್ರ ಇಲ್ಲ ಅಂತ ಹೇಳಿಕೊಂಡು ಬಂದಿದ್ದೇವೆ. ಬಿಜೆಪಿಯವರು ಇಲ್ಲ ಸಲ್ಲದ ಆರೋಪಗಳನ್ನ ಮಾಡುವುದನ್ನು ಈಗಲಾದರೂ ಬಿಡಬೇಕು. ಸಾಮಾಜಿಕ ಕಾರ್ಯಕರ್ತ  ಸ್ನೇಹಮಯಿ ಕೃಷ್ಣ ಕೂಡ ವೃತ ಆರೋಪ ಮಾಡುವುದನ್ನು ನಿಲ್ಲಿಸಬೇಕು.

“ಇಡಿ” ಯವರೂ ಕೂಡ ಈ ಪ್ರಕರಣವನ್ನ ಇಲ್ಲಿಗೆ ನಿಲ್ಲಿಸಬೇಕು. ಮನಿ ಲ್ಯಾಂಡರಿಂಗ್ ವಿಚಾರದಲ್ಲಿ   ಮಾತ್ರ ಇಡಿ ತನಿಖೆ ಮಾಡಲು ಅಧಿಕಾರ ಇರುವುದು. ಇಡಿ ತನಿಖಾ ಸಂಸ್ಥೆ ಸುಮಾರು 5 ವರ್ಷಗಳಿಂದ 7083 ಕೇಸ್ ಗಳ ಬಗ್ಗೆ ತನಿಖೆ ಮಾಡಿದೆ. ಅದರಲ್ಲಿ ಕೇವಲ 42 ಪ್ರಕರಣಗಳು ಮಾತ್ರ ಇತ್ಯರ್ಥ ಆಗಿದೆ. ಇನ್ನುಳಿದ ಪ್ರಮಾಣಗಳಲ್ಲಿ ಯಾವುದೇ ರೀತಿಯಾ ತಾರ್ಕಿಕ ಅಂತ್ಯವನ್ನು ಕಂಡಿಲ್ಲ ಎಂದರು.

ಕೋರ್ಟ್ ರದ್ದು ಪಡಿಸಿದೆ ಸಮನ್ಸ್ “ ಇಡಿ” muda muda 1

ಸ್ನೇಹಮಯಿ ಕೃಷ್ಣ  ಏನು  ಸತ್ಯ ಹರಿಶ್ಚಂದ್ರ ನಾ..? ನ್ಯಾಯಾಲಯದಲ್ಲಿ ಹೋರಾಟ ಮಾಡಲು ಇವನಿಗೆ ಎಲ್ಲಿಂದ ಬರುತ್ತೆ ಹಣ.? ಒಬ್ಬೊಬ್ಬ ವಕೀಲರಿಗೂ ಲಕ್ಷಗಟ್ಟಲೇ ಫೀಸು ಕೊಡಬೇಕು. ಈ ಹಣವನ್ನು ಈತ ಹೇಗೆ ಪೂರೈಸುತ್ತಾನೆ ಎಂದು ಲಕ್ಷ್ಮಣ್ ಶಂಕೆ ವ್ಯಕ್ತಪಡಿಸಿದರು.

ಬಿಜೆಪಿಯವರು ಬೆಂಗಳೂರಿಂದ ಪಾದಯಾತ್ರೆ ಮಾಡಿದ್ರು, ಇಲ್ಲಸಲ್ಲದ ಆರೋಪ ಮಾಡಿದ್ರು . ಈಗ ಒಂದೊಂದಾಗಿ ನಮಗೆ ಈ ಪ್ರಕರಣದಲ್ಲಿ ಗೆಲುವು ಸಿಗುತ್ತಿದೆ. ಈಗಲಾದರೂ ಸಿಎಂ ಕುಟುಂಬಸ್ಥರ ಮೇಲೆ ಆರೋಪ ಮಾಡುವುದನ್ನ ಕೈ ಬಿಡಬೇಕು. ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿಕೆ.

key words: Snehamayi Krishna, Satya Harishchandra, congress, M. Laxman, muda

Snehamayi Krishna, what is Satya Harishchandra? : Congress spokesperson M. Laxman