ಚಂದ್ರಗ್ರಹಣ ಹಿನ್ನೆಲೆ: ನಾಳೆ ಸಂಜೆ 6 ಗಂಟೆಗೆ ಚಾಮುಂಡಿ ಬೆಟ್ಟದ ದೇವಸ್ಥಾನ ಬಂದ್.

ಮೈಸೂರು,ಅಕ್ಟೋಬರ್,27,2023(www.justkannada.in): ಶನಿವಾರ ಚಂದ್ರ ಗ್ರಹಣವಿರುವ ಹಿನ್ನೆಲೆ, ಮೈಸೂರಿನ ಚಾಮುಂಡಿ ಬೆಟ್ಟದ ದೇವಸ್ಥಾನ ಅವಧಿಗೂ ಮುಂಚಿತವಾಗಿ ಬಂದ್ ಆಗಲಿದ್ದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ನಾಳೆ ಸಂಜೆ‌ 6 ಗಂಟೆಗೆ ತಾಯಿ  ಚಾಮುಂಡೇಶ್ವರಿ ದೇವಸ್ಥಾನ ಬಂದ್ ಆಗಲಿದೆ.  ನಾಳೆ ಸಂಜೆ‌ 5 ಗಂಟೆಗೆ ಚಾಮುಂಡಿ ತೆಪ್ಪೊತ್ಸವ ನಡೆಯಲಿದ್ದು, 6 ಗಂಟೆಗೆ ಉತ್ಸವ ಮೂರ್ತಿ ದೇವಸ್ಥಾನಕ್ಕೆ ವಾಪಸ್ ಆಗಲಿದೆ. ಮೂರ್ತಿ ದೇವಸ್ಥಾನಕ್ಕೆ ಬರುತ್ತಿದ್ದಂತೆ ದೇವಸ್ಥಾನ ಬಂದ್ ಆಗಲಿದೆ.

ಗ್ರಹಣ ಕಾಲದಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯ ಜರುಗಲಿದ್ದು,  ನಂತರ ಭಾನುವಾರ ಬೆಳಿಗ್ಗೆ 7.30ಕ್ಕೆ ಜನರಿಗೆ ದರ್ಶನಕ್ಕೆ ದೇವಸ್ಥಾನ ತೆರೆಯಲಿದೆ.

Key words: Lunar Eclipse- Chamundi hill -temple –bandh- tomorrow -6 pm.