Friday, September 18, 2026

BDA Apartments

ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ...
Home Front Page ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ನಿವಾಸದ ಮೇಲೆ ಅರಣ್ಯಾಧಿಕಾರಿಗಳಿಂದ...

ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ನಿವಾಸದ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ.

ಬೆಳಗಾವಿ,ಅಕ್ಟೋಬರ್,27,2023(www.justkannada.in): ಹುಲಿ ಉಗುರಿನ ಪ್ರಕರಣ ಇದೀಗ ರಾಜಕಾರಣಿಗಳಿಗೂ ಸಂಕಷ್ಟ ತಂದಿದ್ದು ಈ ನಡುವೆ ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪದ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ನಿವಾಸದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿವಾಸದ ಮೇಲೆ ಡಿಎಫ್ ಓ ಶಂಕರ್ ಕಳ್ಳೋಲ್ಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ.  ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹುಲಿ ಉಗುರು ಧರಿಸಿದ್ದ ಆರೋಪ ಕೇಳಿ ಬಂದಿದ್ದ ಹಿನ್ನೆಲೆ ಈ ದಾಳಿ ನಡೆಸಲಾಗಿದೆ.ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪ lakshmi-hebbalkar lakshmi hebbalkar

ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನನ್ನ ಮಗ ಧರಿಸಿದ್ದು ಪ್ಲಾಸ್ಟಿಕ್ ಪೆಂಡೆಂಟ್ ಮದುವೆ ಟೈಮ್ ಅಲ್ಲಿ ಅದು ಯಾರೋ ಗಿಫ್ಟ್ ಕೊಟ್ಟಿದ್ದ.  ಅಧಿಕಾರಿಗಳು ಮನೆಗೆ ಬಂದಿದ್ದು ತಪಾಸಣೆ ಮಾಡಿದ್ದಾರೆ. ಒರಿಜಿನಲ್ ಇದ್ದರೇ ಅದನ್ನ ಅಧಿಕಾರಿಗಳು ಪರಿಶೀಲನೆ ಮಾಡ್ತಾರೆ. ನನಗೂ ಒಂದೇ ಕಾನೂನು,  ಸಾಮಾನ್ಯರಿಗೂ ಒಂದೇ ಕಾನೂನು ಎಂದಿದ್ದಾರೆ.

Key words: wearing -tiger claw –pendant- Minister Lakshmi Hebbalkar- son- forest officials.