ನಿವೃತ್ತಿ ಪಿಂಚಣಿ‌ ಕೊಡಿ, ಇಲ್ಲಾ ಸಾಯಿಸಿ ಬಿಡ್ರಿ..! KSOU ವಿರುದ‍್ಧ ಆಕ್ರೋಶ: ಕೊಠಡಿಯಲ್ಲೆ ಧರಣಿ ಕುಳಿತ ನಿವೃತ್ತ ಪ್ರಾಧ್ಯಾಪಕ.

ಮೈಸೂರು, ಅಕ್ಟೋಬರ್,27,2023(www.justkannada.in) :  ನಿವೃತ್ತಿ ಪಿಂಚಣಿ‌ ಕೊಡಿ, ಇಲ್ಲಾ ಸಾಯಿಸಿ ಬಿಡ್ರಿ..! ನಿಮಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ? ನೀವು ಹೊಟ್ಟೆಗೆ ಏನ್ ತಿಂತೀರಾ ಹೇಳ್ರೀ.? ಇದು ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ನಿವೃತ್ತ ಪ್ರಾಧ್ಯಾಪಕರೊಬ್ಬರು  ಆಕ್ರೋಶ ವ್ಯಕ್ತಪಡಿಸಿದ ರೀತಿ.

ಹೌದು ನಿವೃತ್ತಿ ಪಿಂಚಣಿ‌ ಕೊಡಿದ ಹಿನ್ನೆಲೆ ಕೆಎಸ್ ಒಯು ಕುಲಪತಿ  ಶರಣಪ್ಪ ಹಲಸೆ ಅವರ‌ ವಿರುದ್ಧ ಹಿರಿಯ ಲೇಖಕ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ರಂಗಸ್ವಾಮಿ ಕಿಡಿಕಾರಿದ್ದಾರೆ. ಹಿರಿಯ ಅಧಿಕಾರಿ ಕಿರುಕುಳಕ್ಕೆ ಬೇಸತ್ತು ನಿವೃತ್ತ ಪ್ರಾಧ್ಯಾಪಕ ರಂಗಸ್ವಾಮಿ ಅವರು ಕೊಠಡಿಯಲ್ಲೆ ಧರಣಿಗೆ ಕುಳಿತಿದ್ದಾರೆ ಎನ್ನಲಾಗಿದೆ.  ಈ ಮೂಲಕ ಕರ್ನಾಟಕ ರಾಜ್ಯ ಮುಕ್ತ ವಿವಿ ಮತ್ತೊಮ್ಮೆ ಸುದ್ದಿಯಲ್ಲಿದೆ.

ಕನ್ನಡ ಪ್ರಾಧ್ಯಾಪಕರಾಗಿದ್ದ ಪ್ರೊ. ಎ.ರಂಗಸ್ವಾಮಿ ಜುಲೈ 2022ರಲ್ಲಿ ನಿವೃತ್ತಿ ಹೊಂದಿದ್ದರು. ಪ್ರೊ. ಎ.ರಂಗಸ್ವಾಮಿ ಅವರು ಪರೀಕ್ಷಾಂಗ ಕುಲಸಚಿವರಾಗಿ ಎರಡು ಅವಧಿಗೆ ಕೆಲಸ ಮಾಡಿದ್ದರು. ಗಂಗೂಬಾಯಿ ಹಾನಗಲ್ ವಿವಿಗೆ ರಿಜಿಸ್ಟರ್ ಕೂಡ ಆಗಿದ್ದರು. ಜತೆಗೆ ಅರಕಲಗೂಡು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.

ರಂಗಸ್ವಾಮಿ ಅವರು ಕನ್ನಡ ಪುಸ್ತಕ ಮಾಲೆಯಲ್ಲಿ 50 ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದ್ದಾರೆ. ಆದರೆ ಪ್ರೊ.ಎ.ರಂಗಸ್ವಾಮಿ  ಅವರಿಗೆ ನಿವೃತ್ತಿ ಪಿಂಚಣಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಕೆಎಸ್ ಒಯು ವಿಸಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ರಂಗಸ್ವಾಮಿ ಅವರು, ನಿವೃತ್ತರಾದ ಮೂರು ತಿಂಗಳ ಒಳಗೆ ಪೆನ್ಷನ್ ನೀಡಬೇಕು. ಈವರಗೆ ಯಾವುದೇ ಗ್ರಾಜ್ಯುಟಿ ನೀಡಿಲ್ಲ. ಗಳಿಕೆ ರಜೆ ಹಣ ನಿವೃತ್ತಿ‌ ದಿನವೇ ಕೊಡಬೇಕು. ಆರು ತಿಂಗಳಿಂದ ಅಲೆದಾಡಿದರೂ ಪರಿಹಾರವಿಲ್ಲ.  ಪ್ರತಿ ಬಾರಿ ಅಲೆದು ಅಲೆದು ಸುಸ್ತಾಗಿದೆ ಎಂದು  ಕಿಡಿಕಾರಿದ್ದಾರೆ.

Key words: KSOU-Retired -Professor- protest- Pension