Saturday, September 19, 2026

BDA Apartments

Home Front Page ಚಂದ್ರಗ್ರಹಣ ಹಿನ್ನೆಲೆ: ನಾಳೆ ಸಂಜೆ 6 ಗಂಟೆಗೆ ಚಾಮುಂಡಿ ಬೆಟ್ಟದ ದೇವಸ್ಥಾನ ಬಂದ್.

ಚಂದ್ರಗ್ರಹಣ ಹಿನ್ನೆಲೆ: ನಾಳೆ ಸಂಜೆ 6 ಗಂಟೆಗೆ ಚಾಮುಂಡಿ ಬೆಟ್ಟದ ದೇವಸ್ಥಾನ ಬಂದ್.

ಮೈಸೂರು,ಅಕ್ಟೋಬರ್,27,2023(www.justkannada.in): ಶನಿವಾರ ಚಂದ್ರ ಗ್ರಹಣವಿರುವ ಹಿನ್ನೆಲೆ, ಮೈಸೂರಿನ ಚಾಮುಂಡಿ ಬೆಟ್ಟದ ದೇವಸ್ಥಾನ ಅವಧಿಗೂ ಮುಂಚಿತವಾಗಿ ಬಂದ್ ಆಗಲಿದ್ದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ನಾಳೆ ಸಂಜೆ‌ 6 ಗಂಟೆಗೆ ತಾಯಿ  ಚಾಮುಂಡೇಶ್ವರಿ ದೇವಸ್ಥಾನ ಬಂದ್ ಆಗಲಿದೆ.  ನಾಳೆ ಸಂಜೆ‌ 5 ಗಂಟೆಗೆ ಚಾಮುಂಡಿ ತೆಪ್ಪೊತ್ಸವ ನಡೆಯಲಿದ್ದು, 6 ಗಂಟೆಗೆ ಉತ್ಸವ ಮೂರ್ತಿ ದೇವಸ್ಥಾನಕ್ಕೆ ವಾಪಸ್ ಆಗಲಿದೆ. ಮೂರ್ತಿ ದೇವಸ್ಥಾನಕ್ಕೆ ಬರುತ್ತಿದ್ದಂತೆ ದೇವಸ್ಥಾನ ಬಂದ್ ಆಗಲಿದೆ.ಚಂದ್ರಗ್ರಹಣ ಹಿನ್ನೆಲೆ chamundi hills

ಗ್ರಹಣ ಕಾಲದಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯ ಜರುಗಲಿದ್ದು,  ನಂತರ ಭಾನುವಾರ ಬೆಳಿಗ್ಗೆ 7.30ಕ್ಕೆ ಜನರಿಗೆ ದರ್ಶನಕ್ಕೆ ದೇವಸ್ಥಾನ ತೆರೆಯಲಿದೆ.

Key words: Lunar Eclipse- Chamundi hill -temple –bandh- tomorrow -6 pm.