ಲೂಸಿಯಾ ಪವನ್-ಪವರ್ ಸ್ಟಾರ್ ಸಿನಿಮಾದಲ್ಲಿ ಕೆಲಸ ಮಾಡ್ಬೇಕಾ? 10 ನಿಮಿಷದ ಕಿರುಚಿತ್ರ ಮಾಡಿ ನಿಮ್ಮ ಟ್ಯಾಲೆಂಟ್ ತೋರಿಸಿ!

ಬೆಂಗಳೂರು, ಏಪ್ರಿಲ್ 16, 2021 (www.justkannada.in): ಲೂಸಿಯಾ ಪವನ್ ಹಾಗೂ ಪವರ್ ಸ್ಟಾರ್ ಅಪ್ಪು ಅಭಿನಯದ ಚಿತ್ರತಂಡದೊಂದಿಗೆ ಕೆಲಸ ಮಾಡಬೇಕಾ? ಹಾಗಾದ್ರೆ ಜಸ್ಟ್ ಈ ಕೆಲಸ ಮಾಡಿ…!?

ಏನದು ಆ ಕೆಲಸ ಗೊತ್ತಾ?! ನಿಮಗೆ ಪವನ್ ಕುಮಾರ್ ಒಂದು ಚಾಲೆಂಜ್ ನೀಡಿದ್ದಾರೆ. 10 ನಿಮಿಷದ ಒಂದು ಕಿರುಚಿತ್ರವನ್ನು ತಯಾರಿಸಿ ಅದನ್ನು ಪವರ್ ಅವರಿಗೆ ಕಳುಹಿಸಬೇಕು. ಇದು ಇಷ್ಟವಾದರೆ ಅವರ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ನಿಮಗೆ ಸಿಕ್ಕರೂ ಸಿಗಬಹುದು.

ನೀವು ಮಾಡಬೇಕಿರುವುದು ಇಷ್ಟೇ ಪವನ್ ಅವರು ಹೇಳಿರುವಂತೆ ‘ಕನ್ನಡದಲ್ಲಿ’ ವಿಷಯ ಕುರಿತು 10 ನಿಮಿಷದ ಕಿರುಚಿತ್ರವನ್ನು ತಯಾರಿಸಬೇಕು. ನಿಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದರೂ ತೊಂದರೆ ಇಲ್ಲ. ಆದರೆ ಅದು ಕ್ರಿಯೇಟಿವ್ ಆಗಿರಬೇಕು. ಒಟ್ಟು ಬೆಸ್ಟ್ 8 ಕಿರುಚಿತ್ರಗಳನ್ನು ಆಯ್ಕೆ ಮಾಡಿದರೆ ಅದರಲ್ಲಿ ನಾಲ್ವರಿಗೆ ತಲಾ 25 ಸಾವಿರ ನಗದು ಬಹುಮಾನ, ಉಳಿದ ನಾಲ್ವರಿಗೆ ಚಿತ್ರತಂಡದಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ ಎಂದು ಪವರ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಕಿರುಚಿತ್ರವನ್ನು ಎಲ್ಲಿಗೆ ಕಳುಹಿಸಬೇಕು ಎಂಬ ಮಾಹಿತಿಯನ್ನು ಪವನ್ ಕುಮಾರ್ ಏ.28ರಂದು ಹಂಚಿಕೊಳ್ಳಲಿದ್ದಾರೆ.