ಕೊರೋನಾ ಸೋಂಕು ಹೆಚ್ಚಳ: ಏ.20 ರಂದು  ಮಹತ್ವದ ತೀರ್ಮಾನ- ಸಿಎಂ ಬಿಎಸ್ ಯಡಿಯೂರಪ್ಪ…

ಬೆಂಗಳೂರು,ಏಪ್ರಿಲ್,16,2021(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ನಡೆಸಿ ಪ್ರಧಾನಿ ಮೋದಿ ಅವರ ಸಲಹೆ ಪಡೆದು ಏಪ್ರಿಲ್ 20ರಂದು ಮಹತ್ವದ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

 ಕೊರೊನಾ ವೈರಸ್ ಎರಡನೇ ಅಲೆ  ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.  ಸಭೆ ಬಳಿಕ  ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ ವೈ, ಕೊರೊನಾ ವೈರಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 8 ನಗರಗಳಲ್ಲಿ ನೈಟ್ ಕರ್ಪ್ಯೂ ಮುಂದುವರೆಸುತ್ತೇವೆ. ಏಪ್ರಿಲ್ 18 ರಂದು ಸರ್ವಪಕ್ಷ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ, ಹಾಗೆಯೇ  ಪ್ರಧಾನಿ ನರೇಂದ್ರ ಮೋದಿ  ಅವರ ಜತೆ ಚರ್ಚಿಸಿ ಏಪ್ರಿಲ್ 20 ರ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಉಳಿದಂತೆ ಯಾವುದೇ ತೀರ್ಮಾನ ಆಗಿಲ್ಲ ಎಂದು  ಹೇಳಿದರು.Increase - corona –infection-Next decision –april 20- CM BS Yeddyurappa.

ವಿಪಕ್ಷಗಳ ನಾಯಕರು ಸೇರಿದಂತೆ ಸರ್ವ ಪಕ್ಷ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿಯೂ ರಾಜ್ಯದಲ್ಲಿನ ಕೊರೋನಾ ನಿಯಂತ್ರಣಕ್ಕಾಗಿ ಕೈಗೊಳ್ಳ ಬಹುದಾದ ಕ್ರಮಗಳ ಕುರಿತಂತೆ ಸಲಹೆಯನ್ನು ಪಡೆಯಲಾಗುತ್ತದೆ. ಇದಾದ ಬಳಿಕ ಮಂಗಳವಾರ ಸಚಿವರು, ಅಧಿಕಾರಿಗಳು, ತಜ್ಞರ ಸಭೆಯನ್ನು ಕರೆದಿದ್ದು, ಅಲ್ಲಿಯೂ ಸರ್ವ ಪಕ್ಷ ಸಭೆಯಲ್ಲಿ ನಾಯಕರು ನೀಡಿದಂತ ಸಲಹೆ ಕುರಿತಂತೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಿಎಸ್ ವೈ ತಿಳಿಸಿದ್ದಾರೆ.

ENGLISH SUMMARY….

Increase in Corona cases: Crucial decision to be taken on Apr. 20 – CM BSY
Bengaluru, Apr. 16, 2021 (www.justkannada.in): Chief Minister B.S. Yedyurappa has informed that he would conduct an all-party meeting soon and get suggestions from Prime Minister Narendra Modi and take a crucial decision on April 20, over the increasing cases of COVID-19 Pandemic in the state.Increase - corona –infection-Next decision –april 20- CM BS Yeddyurappa.
The Chief Minister today held a meeting with senior officials of various government departments. Speaking to the press persons after the meeting he said, “the night curfew which is presently imposed in 8 districts in the state would be continued following an increase in corona cases. An all-party meeting will be held on April 18 to discuss the situation and how to control the pandemic. I will also discuss the situation with Prime Minister Modi and take a crucial decision on April 20. Nothing else has been decided as of now,” he informed.
Keywords: Chief Minister B.S. Yedyurappa/ all-party meeting/ crucial decision on April 20/ Prime Minister Narendra Modi

Key words: Increase – corona –infection-Next decision –april 20- CM BS Yeddyurappa.