ಸಹನೆ ಕಳೆದುಕೊಂಡು ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕೊಹ್ಲಿ

ಬೆಂಗಳೂರು, ಏಪ್ರಿಲ್ 16, 2021 (www.justkannada.in): 

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಹನೆ ಕಳೆದುಕೊಂಡಿದ್ದರು. ಐಪಿಎಲ್‌ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.2 ಅನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ.

ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಕೊಯ್ಲಿ ಔಟಾದಾಗ ಆರ್‌ಸಿಬಿ ಡಗ್​ಔಟ್‌ನಲ್ಲಿದ್ದ ಕುರ್ಚಿಯನ್ನು ಬ್ಯಾಟ್‌ನಿಂದ ತಳ್ಳಿ ಕೋಪ ಹೊರಹಾಕಿದ್ದರು.

ನೀತಿ ಸಂಹಿತೆಯ ಹಂತ 1 ಉಲ್ಲಂಘನೆಯ ವಿಚಾರದಲ್ಲಿ ಪಂದ್ಯದ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿದೆ.