Sunday, September 20, 2026

BDA Apartments

ವಾಟ್ಸಪ್ ನಲ್ಲಿ ಪ್ರಿಯಕರ ಕಳಿಸಿದ ಫೋಟೊ ನೋಡಿ ಮನನೊಂದ ಗೃಹಿಣಿ ಆತ್ಮಹತ್ಯೆ… BDA...
Home Crime ವಾಟ್ಸಪ್ ನಲ್ಲಿ ಪ್ರಿಯಕರ ಕಳಿಸಿದ ಫೋಟೊ ನೋಡಿ ಮನನೊಂದ ಗೃಹಿಣಿ ಆತ್ಮಹತ್ಯೆ…..

ವಾಟ್ಸಪ್ ನಲ್ಲಿ ಪ್ರಿಯಕರ ಕಳಿಸಿದ ಫೋಟೊ ನೋಡಿ ಮನನೊಂದ ಗೃಹಿಣಿ ಆತ್ಮಹತ್ಯೆ…..

ಮೈಸೂರು,ಜೂ,19,2020(www.justkannada.in): ಪ್ರಿಯಕರನೊಂದಿಗಿನ ಮನಸ್ತಾಪದಿಂದ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಟಿ.ಕೆ.ಲೇಔಟ್ ನ ನಿವಾಸಿ ಶೀಲಾ(35)  ನೇಣಿಗೆ ಶರಣಾದವರು. ಶೀಲಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಗೃಹಿಣಿಯ ಪ್ರಿಯಕರ ವೆಂಕಟೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.lovers-whatsapp-housewife-commits-suicide-mysore

ವೆಂಕಟೇಶ್ ಗಂಡನಿಂದ ದೂರವಾಗಿದ್ದ ಶೀಲಾಳನ್ನು ಪರಿಚಯ ಮಾಡಿಕೊಂಡು ಆಕೆಗೆ ಜೀವನ ರೂಪಿಸಿಕೊಡುವುದಾಗಿ ನಂಬಿಸಿದ್ದ.  ಅಕೆಯಿಂದ 10 ಲಕ್ಷ ರೂ. ವರೆಗೂ ಸಾಲ ಮಾಡಿಸಿ ಪೀಠೋಪಕರಣದ ಅಂಗಡಿ ಇರಿಸಿದ್ದ.  ಇತ್ತೀಚೆಗೆ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.

ವಾಟ್ಸ್‌ಆಪ್ ಮೆಸೇಜ್ ನಲ್ಲಿಯೇ ಇಬ್ಬರ ಜಗಳ ಮುಂದುವರಿದು ವೆಂಕಟೇಶ್ ವಿಷದ ಬಾಟಲಿಯೊಂದರ ಫೋಟೋ ಕಳುಹಿಸಿ ಇದನ್ನು ಕುಡಿದು ಸಾಯುವಂತೆ ತಿಳಿಸಿದ್ದ. ಈ ಪೋಟೊ ನೋಡಿದ ತಮ್ಮ ಮಗಳು ಶೀಲಾ ಮನನೊಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶೀಲಾ ಪೋಷಕರು ದೂರು ನೀಡಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೆಂಕಟೇಶ್ ಎಲ್‌ಐಸಿ ಏಜೆಂಟ್ ಆಗಿದ್ದ ಎನ್ನಲಾಗಿದೆ.

Key words: lovers -WhatsApp – –housewife- commits suicide-mysore