Tuesday, September 29, 2026

BDA Apartments

ಪ್ರೇಮ ವಿವಾಹ: ಮದುವೆಯಾದ ನಾಲ್ಕು ತಿಂಗಳಿಗೆ ನವದಂಪತಿ ಆತ್ಮಹತ್ಯೆ BDA JK_Adv BDA Adv
Home Crime ಪ್ರೇಮ ವಿವಾಹ: ಮದುವೆಯಾದ ನಾಲ್ಕು ತಿಂಗಳಿಗೆ ನವದಂಪತಿ ಆತ್ಮಹತ್ಯೆ.

ಪ್ರೇಮ ವಿವಾಹ: ಮದುವೆಯಾದ ನಾಲ್ಕು ತಿಂಗಳಿಗೆ ನವದಂಪತಿ ಆತ್ಮಹತ್ಯೆ.

ಮೈಸೂರು,ಫೆಬ್ರವರಿ,23,2022(www.justkannada.in): ಪೋಷಕರ ವಿರೋಧದ ‌ನಡುವೆಯೂ ಪ್ರೇಮ ವಿವಾಹವಾಗಿದ್ದ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಸಿಂಗರಮಾರನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ರಾಕೇಶ್ (25), ಅರ್ಚನಾ(20)ಮೃತ ಪ್ರೇಮಿಗಳು. ಎರಡು ವರ್ಷಗಳಿಂದ ರಾಕೇಶ್, ಅರ್ಚನಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಒಂದೇ ಊರಿನ ಅಕ್ಕಪಕ್ಕದ ಮನೆಯವರಾಗಿದ್ದರು. ಪ್ರೀತಿಗೆ ಪೋಷಕರು ವಿರೋಧಿಸಿದ್ದ ಹಿನ್ನಲೆ ನಾಲ್ಕು ತಿಂಗಳ ಹಿಂದೆ ಪ್ರೇಮಿಗಳು ಓಡಿ ಹೋಗಿದ್ದರು.

ಇಬ್ಬರೂ ಅನ್ಯ ಜಾತಿಗೆ ಸೇರಿದ ಹಿನ್ನಲೆ ಪೋಷಕರು ಇವರ ಪ್ರೀತಿಗೆ  ವಿರೋಧ ವ್ಯಕ್ತಪಡಿಸಿದ್ದರು. ಈ ಮಧ್ಯೆ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ರಾಕೇಶ್ ಮತ್ತು ಅರ್ಚನಾ ತಡರಾತ್ರಿ ಗ್ರಾಮಕ್ಕೆ ಬಂದು ಊರ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು  ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಬಿಳಿಕೆರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: lovers-suicide-mysore