ಹರ್ಷ ಹತ್ಯೆ ಪ್ರಕರಣ: ಸರ್ಕಾರ ನನ್ನನ್ನೂ ಬಂಧಿಸಲಿ ಎಂದ್ರು ಡಿ.ಕೆ ಶಿವಕುಮಾರ್.

ಬೆಂಗಳೂರು,ಫೆಬ್ರವರಿ,23,2022(www.justkannada.in):  ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಪ್ರಚೋದನೆ ಇದೆ ಎಂದು ಆರೋಪಿಸಿದ್ದಾರೆ. ಸರ್ಕಾರ ನನ್ನನ್ನೂ ಬಂಧಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಈ ಕುರಿತು   ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್, ಹರ್ಷ ಕೊಲೆ ಕೇಸಲ್ಲಿ ಕೆಲವರನ್ನ ಬಂಧಿಸಿದ್ದಾರೆ.  ಇದಕ್ಕೆ ನನ್ನ ಪ್ರಚೋದನೆ ಇದೆ ಅಂತಾರೆ.  ಸರ್ಕಾರ ನನ್ನನ್ನೂ ಬಂಧಿಸಲಿ. ಸಚಿವರೇ ನಿಷೇಧಾಜ್ಞೆ ನಿಯಮ ಉಲ್ಲಂಘನೆ ಮಾಡಿ ಮೆರವಣಿಗೆ ನಡೆಸಿ ಕಲ್ಲು ಹೊಡೆಸಿದ್ದಾರೆ. ಸಚಿವರ ಮೇಲೆ ಯಾಕೆ ಕೇಸ್ ಹಾಕಿಲ್ಲ. ಇದಕ್ಕೆ ಖಾಕಿ ತೊಟ್ಟವರು ಉತ್ತರಿಸಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.

Key words: Harsha- murder-case-DK Sivakumar