ನನ್ನ ಜೀವನದ ಸುದೀರ್ಘ ಅನುಭವ ಪ್ರಧಾನಿ ಮೋದಿ ಬಳಿ  ಹಂಚಿಕೊಂಡಿದ್ದೇನೆ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ.

ತುಮಕೂರು, ಏಪ್ರಿಲ್​ 15, 2024 (www.justkannada.in): ನನ್ನ ಜೀವನದ ಸುದೀರ್ಘ ಅನುಭವವನ್ನು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ   ಬಳಿ ಹಂಚಿಕೊಂಡಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದರು.

ಕೊರಟಗೆರೆ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ ದೇವೇಗೌಡರು, ಮೋದಿ ಅವರ ಭಾಷಣದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ.  ನನ್ನ ರಾಜಕೀಯ ಜೀವನದಲ್ಲಿ 15 ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. 3 ಸಾರಿ ಸೋತಿದ್ದೇನೆ. ರಾಜಕೀಯ ಚದುರಂಗದಾಟದಲ್ಲಿ ಯಾವಾಗ ಏನು ಆಗುತ್ತೆ ಊಹೆ ಮಾಡುವುದಕ್ಕೆ ಆಗಲ್ಲ ಎಂದು ಹೇಳಿದರು.

ಯಾವ ಟ್ರಿಬ್ಯೂನಲ್ ಬೆಂಗಳೂರಿಗೆ ನೀರಿಲ್ಲ ಅಂತಾ ಬರೆದಿದ್ದಾರೋ ಆ ವಿಷಯವನ್ನ ಈ ರಾಷ್ಟ್ರದ ಪ್ರಧಾನಿಗಳು ಎಲ್ಲರಿಗೂ ಮನದಟ್ಟು ಆಗುವಂತೆ ನಿನ್ನೆ ಪ್ರಸ್ತಾಪ ಮಾಡಿದ್ದಾರೆ. ಇದು ಬಹಳ ಮುಖ್ಯ. ನಾನೇನು ತುಮಕೂರಿನಲ್ಲಿ ನಿಲ್ಲಬೇಕು ಅಂತಾ ಇರಿಲಿಲ್ಲ. 2019 ಮೇ 13 ರಂದು ಘೋಷಣೆ ಮಾಡಿದ್ದೆ. ಆದರೇ ಸನ್ನಿವೇಶ ನಿಂತುಕೊಂಡೆ. ನಾನು‌ ತುಮಕೂರಿಗೆ ನೀರು ಕೋಡುವುದಿಲ್ಲ ಅಂತೇಳಿ‌ ನನ್ನ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

Ke words:  long experience,HD Deve Gowda, PM Modi