ಮೈಸೂರು ಲೋಕಸಭೆ : ಕಾಂಗ್ರೆಸ್‌  ಒಕ್ಕಲಿಗಾಸ್ತ್ರಕ್ಕೆ  ದೊಡ್ಡಗೌಡ್ರೇ ಚೆಕ್ಮೇಟ್ ..!

Mysuru Lok Sabha Elections Deve Gowda, is the checkmate for Congress.

 

ಮೈಸೂರು ಏ.15, 2024  : (www.justkannada.in news ) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮೈಸೂರಿನಲ್ಲಿ ನಡೆದ ಬೃಹತ್‌ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ ಮಾತನಾಡಿದ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಜಾತ್ಯಾತೀತ ಜನತಾದಳ ಮತ್ತು ಬಿಜೆಪಿ ಮೈತ್ರಿಗೆ ಸ್ಪಷ್ಟನೆಯನ್ನು ಸಹ ಇದೇ ವೇದಿಕೆಯಲ್ಲಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು, ಕರ್ನಾಟಕದ ಲೂಟಿಯಲ್ಲಿ ತೊಡಗಿರುವ ಕಾಂಗ್ರೆಸ್‌ ಪಕ್ಷದಿಂದ ರಾಜ್ಯವನ್ನು ಬಚಾವ್‌ ಮಾಡಬೇಕು . ಈ ಉದ್ದೇಶದಿಂದಲೇ ಬಿಜೆಪಿ ಜತೆಗೆ ಹೋಗುವಂತೆ ನಾನೇ ಕುಮಾರಸ್ವಾಮಿಗೆ ಹೇಳಿದೆ ಎಂದು ದೇವೇಗೌಡ ಭಾಷಣದಲ್ಲಿ ತಿಳಿಸಿದರು.

ತೊಂಬತ್ತೊಂದರ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿಗಳ ಕುಗ್ಗದ  ಆತ್ಮವಿಶ್ವಾಸ, ಜ್ಞಾನಪ ಶಕ್ತಿ ಕಂಡು ಪ್ರಧಾನಿಯಾದಿಯಾಗಿ ನೆರೆದಿದ್ದವರು ಆಶ್ಚರ್ಯಚಕಿತರಾದರು. ದೇವೇಗೌಡರು ಅಬ್ಬರಿಸಿ ಬೊಬ್ಬರಿದ ಪರಿ ಕಂಡು ಮೈತ್ರಿ ಪಕ್ಷದ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿತು ಎಂದರೆ ಅತಿಶಯೋಕ್ತಿಯಾಗದು.

ನಿನ್ನೆಯ ಈ ಬೆಳವಣಿಗೆ ಹಳೇ ಮೈಸೂರು ಭಾಗದಲ್ಲಿನ ಒಕ್ಕಲಿಗರ ಮೇಲೆ ಧನಾತ್ಮಕ ಪರಿಣಾಮ ಬೀರಿರುವುದುಂತು ಸತ್ಯ.

‘ರಾಜ’ ವಂಶದ ಯದುವೀರ್‌  ವಿರುದ್ಧ ‘ಸಾಮಾನ್ಯ’ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಕ್ಷೇತ್ರದ ಪ್ರಬಲ ಜಾತಿಯಾದ ಒಕ್ಕಲಿಗ ಸಮುದಾಯಕ್ಕೆ ಎಂ. ಲಕ್ಷ್ಮಣ್ ಸೇರಿದವರು. ಹಿಂದಿನ ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರತಿನಿತ್ಯ ವಾಗ್ದಾಳಿ ನಡೆಸುವ ಮೂಲಕ ಚಿರಪರಿಚಿತರಾದವರು. ಸ್ವಂತ ಹಣಬಲ ಇಲ್ಲದ ಅವರು ಸಿದ್ದರಾಮಯ್ಯನವರ ವೈಯಕ್ತಿಕ ವರ್ಚಸ್ಸು, ಪಕ್ಷ ಸಂಘಟನೆ ಮತ್ತು ಜಾತಿ ಸಹಾನುಭೂತಿ ನೆಚ್ಚಿಕೊಂಡಿದ್ದಾರೆ. ಆ ಮೂಲಕವೇ ಮೈಸೂರನ್ನು ಬಿಜೆಪಿಯಿಂದ ಕಿತ್ತುಕೊಳ್ಳಲು ಮುಂದಾಗಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌, 1977ರ ನಂತರ ಮೊದಲ ಬಾರಿಗೆ ಪಕ್ಷವು ಒಕ್ಕಲಿಗರನ್ನು ಕಣಕ್ಕಿಳಿಸಿ ಜಾತಿಯಿಂದ ಬಿಜೆಪಿ ಬೆಂಬಲಿಗರಲ್ಲಿ ಮೂಡಿರುವ ಅಸಮಾಧಾನವನ್ನು ಹಣಿಯಲು ಮುಂದಾಗಿದೆ.

ಸಿದ್ದರಾಮಯ್ಯ ಈ ಬಾರಿ ಮೈಸೂರನ್ನು ಗೆಲ್ಲುವುದನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಏಕೆಂದರೆ 2014ರಲ್ಲಿ ಅವರ ಮುಖ್ಯಮಂತ್ರಿಯಾಗಿ ಮತ್ತು 2019ರಲ್ಲಿ ಅವರು ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸಮ್ಮಿಶ್ರ ಉಸ್ತುವಾರಿ ಸಮಿತಿಯ ನೇತೃತ್ವ ವಹಿಸಿದ್ದಾಗ ಕಾಂಗ್ರೆಸ್ ಮೈಸೂರನ್ನು ಕಳೆದುಕೊಂಡಿತ್ತು.

ಈ ಕಾರಣದಿಂದಲೇ ಈಗ ಮತ್ತೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ, ಮೈಸೂರು ಲೋಕಸಭಾ ಕ್ಷೇತ್ರ  ಗೆಲ್ಲಲೇ ಬೇಕು ಎಂಬ ಪಠತೊಟ್ಟಿದ್ದಾರೆ. ಆದ್ದರಿಂದಲೇ ಹುಟ್ಟೂರಲ್ಲಿ ಚುನಾವಣೆ ಪ್ರಚಾರದ ವೇಳೆ,  ನಿರಾಸೆ ಮಾಡಬೇಡಿ ಎಂದು ತಮ್ಮ ಊರಿನ ಮತದಾರರಲ್ಲಿ ಮನವಿ ಮಾಡಿದ್ದು.

 

ಎಬಿಪಿ-ಸಿವೋಟರ್ ಒಪಿನಿಯನ್ ಪೋಲ್: ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಬಿಜೆಪಿಗೆ ಲೋಕಸಭೆ ಪ್ರಾಬಲ್ಯ..!

 

ಮುನಿಸು ಮರೆತು ಚಾಮರಾಜನಗರ ಸಂಸದ ಶ್ರೀನಿವಾಸ್‌ ಪ್ರಸಾದ್‌ ನಿವಾಸಕ್ಕೂ ಭೇಟಿ ನೀಡಿ ಸಿದ್ದರಾಮಯ್ಯ ಅಚ್ಚರಿಯ ಮೂಡಿಸಿದರು.

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಒಕ್ಕಲಿಗರು ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ಗೆ ಮತ ನೀಡುವಂತೆ ಮನವೊಲಿಸುವ ನಿಟ್ಟಿನಲ್ಲಿ ಕಸರತ್ತು ಮಾಡುತ್ತಿದ್ದಾರೆ. ಫಲಿತಾಂಶ ವ್ಯತಿರಿಕ್ತವಾದಲ್ಲಿ ತಾವು ಸೇರಿದಂತೆ ಎಲ್ಲಾ ಒಕ್ಕಲಿಗ ಸಚಿವರ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುವ ಮೂಲಕ ʼ ಒಕ್ಕಲಿಗ ಕಾರ್ಡ್ ʼ ಪ್ಲೇ ಮಾಡುತ್ತಿದ್ದಾರೆ.

key words :  Mysuru, Lok Sabha Elections, Deve Gowda, is the checkmate, for Congress.

ENGLISH SUMMARY : 

Even at the age of ninety-one, the former prime minister’s undiminished confidence and wisdom were amazed by his self-confidence and wisdom. It would not be an exaggeration to say that the enthusiasm of the alliance workers was boosted by Deve Gowda speech.

It is true that yesterday’s development has had a positive impact on the Vokkaligas in the old Mysore region.