Friday, October 2, 2026

BDA Apartments

Home Front Page ವಿಚಾರಣೆಗೆ ಹಾಜರಾಗುವಂತೆ ಸಚಿವ ಜಮೀರ್ ಗೆ ಲೋಕಾಯುಕ್ತ ನೋಟಿಸ್

ವಿಚಾರಣೆಗೆ ಹಾಜರಾಗುವಂತೆ ಸಚಿವ ಜಮೀರ್ ಗೆ ಲೋಕಾಯುಕ್ತ ನೋಟಿಸ್

ವಿಚಾರಣೆಗೆ ಹಾಜರಾಗುವಂತೆ ಸಚಿವ ಜಮೀರ್ ಗೆ ಲೋಕಾಯುಕ್ತ ನೋಟಿಸ್ puliyogare,ayyangar WhatsApp 11 ...

ಬೆಂಗಳೂರು,ನವೆಂಬರ್,16,2024 (www.justkannada.in): ಅಕ್ರಮ ಆಸ್ತಿ ಗಳಿಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಲೋಕಾಯುಕ್ತ ನೋಟಿಸ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸೂಕ್ತ ದಾಖಲೆಯೊಂದಿಗೆ  ಡಿಸೆಂಬರ್ 3ರಂದು ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಜಮೀರ್ ಅಹ್ಮದ್ ಖಾನ್ ಅವರಿಗೆ ಲೋಕಾಯುಕ್ತ ನೋಟಿಸ್ ನೀಡಿದೆ ಎನ್ನಲಾಗಿದೆ.

3 ವರ್ಷಗಳ ಹಿಂದಿನ ಇಡಿ ವರದಿ ಆಧರಿಸಿ ನೋಟಿಸ್ ನೀಡಲಾಗಿದೆ. ಜಮೀರ್ ವಿರುದ್ದ ಇಡಿ ಅಧಿಕಾರಿಗಳು ಎಸಿಬಿಯಲ್ಲಿ  ಕೇಸ್ ದಾಖಲಿಸಿದ್ದರು.  ಎಸಿಬಿ ರದ್ದಾದ ಬಳಿಕ ಲೋಕಾಯುಕ್ತದಿಂದ ತನಿಖೆ  ನಡೆದಿದ್ದು ಲೋಕಾಯುಕ್ತ ತನಿಖೆ ಮುಗಿದ ಬೆನ್ನಲ್ಲೆ ಡಿಸೆಂಬರ್ 3 ರಂದು ವಿಚಾರಣೆಗೆ ಹಾಜರಾಗುವಂತೆ ಸಚಿವ ಜಮೀರ್ ಅಹ್ಮದ್ ಖಾನ್ ಗೆ ನೋಟಿಸ್ ನೀಡಲಾಗಿದೆ.

Key words: Lokayukta, notice, Minister, Jameer, inquiry