Sunday, November 8, 2026

Dasara Wishes

Happy Dasara
Home Front Page ಯಾವುದೇ ಲಾಬಿಯಿಂದ ನಾನು ಬಿಜೆಪಿ ಟಿಕೆಟ್ ಪಡೆದಿಲ್ಲ- ಯದುವೀರ್

ಯಾವುದೇ ಲಾಬಿಯಿಂದ ನಾನು ಬಿಜೆಪಿ ಟಿಕೆಟ್ ಪಡೆದಿಲ್ಲ- ಯದುವೀರ್

ಮೈಸೂರು,ಮಾರ್ಚ್,15,2024(www.justkannada.in): ನಾನು ಯಾವುದೇ ಲಾಬಿಯಿಂದ ಬಿಜೆಪಿ ಟಿಕೆಟ್ ಪಡೆದಿಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಳೆದ 1 ವರ್ಷದಿಂದ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇತ್ತು. ಅರಮನೆ ರಾಜ್ಯ ಬಿಜೆಪಿ ಜತೆ ಸದಾ ಸಂಪರ್ಕದಲ್ಲಿತ್ತು. ನನ್ನ ಸಿದ್ದಾಂತ ಅಭಿವೃದ್ದಿ ದೃಷ್ಠಿಕೋನ ನೋಡಿದಾಗ ಬಿಜೆಪಿ ಕಡೆ ಇತ್ತು.ಯಾವುದೇ ಲಾಬಿಯಿಂದ ನಾನು ಬಿಜೆಪಿ ಟಿಕೆಟ್ ಪಡೆದಿಲ್ಲ- ಯದುವೀರ್ yaduveer

ರಾಜಕಾರಣದ ಆಳ ಅಗಲ ಅರಿತು ರಾಜಕಾರಣಕ್ಕೆ ಬಂದಿದ್ದೇನೆ. ಸಮಾಜದಲ್ಲಿ ಅಭಿವೃದ್ದಿ ತರಬೇಕಾದರೇ ರಾಜಕಾರಣವೇ ಮಾರ್ಗ ಎಂದು ಯದುವೀರ್ ಅವರು ನುಡಿದರು.

Key words: lokasabha-election- mysore-kodagu-bjp-candidate-yaduveer