ಚಾಮರಾಜನಗರ ಜಿಲ್ಲೆ ಸ್ಥಳೀಯ ಸಂಸ್ಥೆ ಚುನಾವಣೆ: ಗುಂಡ್ಲುಪೇಟೆ ಪುರಸಭೆ ಬಿಜೆಪಿ ತೆಕ್ಕೆಗೆ: ಹನೂರು ಪ.ಪಂ ಅತಂತ್ರ..

0
964

ಚಾಮರಾಜನಗರ,ಮೇ,31,2019(www.justkannada.in): ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಗುಂಡ್ಲುಪೇಟೆ ಪುರಸಭೆ ಬಿಜೆಪಿ ತೆಕ್ಕೆಗೆ ಬಿದ್ದರೇ ಹನೂರು ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಗುಂಡ್ಲುಪೇಟೆ ಪುರಸಭೆಯ 23 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಇದರಲ್ಲಿ ಬಿಜೆಪಿಗೆ  13, ಕಾಂಗ್ರೆಸ್ ಗೆ 8, ಎಸ್.ಡಿ.ಪಿ.ಐ.- 1, ಪಕ್ಷೇತರ  1 ಸ್ಥಾನ ಗಳಿಸಿದೆ. ಈ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ.

ಹನೂರು ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಜೆಡಿಎಸ್ 06 , ಕಾಂಗ್ರೆಸ್ 04. ಬಿಜೆಪಿ 03 ಸ್ಥಾನಗಳನ್ನ ಪಡೆದಿವೆ.

ಇನ್ನು ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಜಯಸಾಧಿಸಿದೆ. ಕಾಂಗ್ರೆಸ್ 10, ಬಿಜೆಪಿ 01 ಸ್ಥಾನದಲ್ಲಿ ಜಯ ಸಾಧಿಸಿದೆ.

Key words: Local body elections in Chamarajanagar district.Gundlupet municipality BJP won

#Localbodyelections #Chamarajanagardistrict #Gundlupet #municipality #BJP