ನಡು ರಸ್ತೆಯಲ್ಲಿ ಉರುಳಿ ಬಿದ್ದ ಕ್ಯಾಂಟರ್: ಡ್ರೈವರ್ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರು..

0
418

ಮೈಸೂರು,ಮೇ,31,2019(www.justkannada.in): ನಡು ರಸ್ತೆಯಲ್ಲಿ ಕ್ಯಾಂಟರ್ ಉರುಳಿ ಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಶೇಷಾದ್ರಿಪುರಂ ಕಾಲೇಜಿನ ಬಳಿಯ  ರಿಂಗ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗುಜರಾತ್ ನಿಂದ ತಮಿಳುನಾಡುಗೆ ಯಂತ್ರೋಪಕರಣಗಳನ್ನು ಸಾಗಿಸುತ್ತಿದ್ದ ವಾಹನ ತಿರುವುನಲ್ಲಿ ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆದ ರಭಸಕ್ಕೆ ಕ್ಯಾಂಟರ್ ಮುಂಬಾಗ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಡ್ರೈವರ್ ಹಾಗೂ ಕ್ಲೀನರ್ ಪಾರಾಗಿದ್ದಾರೆ.

ಇದೇ ತಿರುವಿನಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದ್ದು. ನೆನ್ನೆ ಇದೇ ಜಾಗದಲ್ಲಿ ಸರಕು ಸಾಗಾಣಿಕೆ ವಾಹನ ಪಲ್ಟಿ ಹೊಡೆದಿತ್ತು. ಅವೈಜ್ಞಾನಿಕವಾಗಿ ತಿರುವು ನಿರ್ಮಾಣ ಮಾಡಿರುವುದೇ ಇಂತಹ ಘಟನೆಗಳು ನಡೆಯಲು ಕಾರಣ. ಈಗಾಗಲೇ ಅನೇಕಾ ಬಾರಿ ಇದೇ ಜಾಗದಲ್ಲಿ ವಾಹನಗಳಿ ಪಲ್ಟಿ ಹೊಡೆದಿದೆ. ರಸ್ತೆ ನಿರ್ಮಾಣದ ವೇಳೆಯಲ್ಲಿ ತೋರಿರುವು ಅವೈಜ್ಞಾನಿಕ ನಿರ್ಧಾರಗಳೇ ಇದಕ್ಕೆ ಕಾರಣ. ಈ ತಿರುವಿನಲ್ಲಿ ಪದೇ ಪದೇ ಸಂಭವಿಸುವ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

Key words: #Cantor #palty  #road #mysore