ಅಮಿತ್ ಶಾಗೆ ಗೃಹ, ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆ: ಯಾವ ಸಚಿವರಿಗೆ ಯಾವ ಯಾವ ಖಾತೆ ಇಲ್ಲಿದೆ ಮಾಹಿತಿ…

ನವದೆಹಲಿ,ಮೇ 31,2019(www.justkannada.in): 2ನೇ ಬಾರಿಗೆ ದೇಶದ ಪ್ರಧಾನಿಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು  ಇಂದು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

ಪ್ರಧಾನಿ ಮೋದಿ ಸಂಪುಟದಲ್ಲಿ 2ನೇ ಖಾತೆಯಾಗಿರುವ ಗೃಹಖಾತೆಯನ್ನ ಅಮಿತ್ ಶಾಗೆ ನೀಡಲಾಗಿದೆ.  ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ನೀಡಲಾಗಿದೆ. ಕಳೆದ ಬಾರಿ ಗೃಹಖಾತೆ ನಿಭಾಯಿಸಿದ್ದ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆ ನೀಡಲಾಗಿದೆ.

ಇನ್ನು ಕೇಂದ್ರ ಸಚಿವ ಸ್ಥಾನ ಪಡೆದಿರುವ ರಾಜ್ಯದ ಮೂರು ಸಂಸದರಿಗೂ ಖಾತೆ ಹಂಚಿಕೆ ಮಾಡಲಾಗಿದೆ.  ಡಿವಿ ಸದಾನಂದ ಗೌಡರಿಗೆ ರಾಸಾಯನಿಕ, ರಸಗೊಬ್ಬರ ಖಾತೆ, ಪ್ರಹ್ಲಾದ್ ಜೋಶಿ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಖಾತೆ ಹಾಗೂ ಸುರೇಶ್ ಅಂಗಡಿ ರೈಲ್ವೆ ರಾಜ್ಯ ಖಾತೆ ನಿಭಾಯಿಸಲಿದ್ದಾರೆ.

ಪ್ರಧಾನಿ ಮೋದಿ ಅವರ ಸಂಪುಟದಲ್ಲಿರುವ ಇತರೇ ಸಚಿವರ ಪಟ್ಟಿ ಇಲ್ಲಿದೆ…

ರವಿಶಂಕರ್ ಪ್ರಸಾದ್ – ಕಾನೂನು ಮತ್ತು  ಸಂಪರ್ಕ ಮಾಹಿತಿ ಖಾತೆ.

ನಿತಿನ್ ಗಡ್ಕರಿ- ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ,

ರಾಮ್‌ ವಿಲಾಸ್ ಪಾಸ್ವಾನ್- ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ.

ನರೇಂದ್ರ ಸಿಂಗ್ ತೋಮಾರ್- ಕೃಷಿ ಮತ್ತು ರೈತರ ಅಭ್ಯುದಯ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್

ಡಾ.ಸುಬ್ರಹ್ಮಣ್ಯಂ ಜೈಶಂಕರ್- ವಿದೇಶಾಂಗ ವ್ಯವಹಾರ.

ಡಾ.ಹರ್ಷವರ್ಧನ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ.

ಪ್ರಕಾಶ್ ಜಾವಡೇಕರ್- ಪರಿಸರ, ಅರಣ್ಯ, ಹವಾಮಾನ ಬದಲಾವಣೆ. ಮಾಹಿತಿ ಮತ್ತು ಪ್ರಸಾರ ಇಲಾಖೆ.

ಪೀಯೂಷ್ ಗೋಯಲ್- ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ,

ಧರ್ಮೇಂದ್ರ ಪ್ರಧಾನ್- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಉಕ್ಕು.

ಮುಕ್ತಾರ್ ಅಬ್ಬಾಸ್ ನಖ್ವಿ-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,

ಮಹೇಂದ್ರ ನಾಥ್ ಪಾಂಡೆ- ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ.

ಸ್ಮೃತಿ ಇರಾನಿ –ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ.

Key words: Amit Shah’s Home Ministry, Defense Ministry for Rajnath Singh in Union Cabinet

 

#AmitShah # HomeMinistry #DefenseMinistry #RajnathSingh  #Union Cabinet