Thursday, September 24, 2026

BDA Apartments

Home Front Page ಒಂದು ಜಾತಿಯಿಂದ ದೇಶ ಕಟ್ಟಲು ಆಗಲ್ಲ: ಎಲ್ಲರೂ ಸೇರಿದರೇ ಮಾತ್ರ ಅಭಿವೃದ್ಧಿ ಸಾಧ್ಯ-ಮಲ್ಲಿಕಾರ್ಜುನ ಖರ್ಗೆ.

ಒಂದು ಜಾತಿಯಿಂದ ದೇಶ ಕಟ್ಟಲು ಆಗಲ್ಲ: ಎಲ್ಲರೂ ಸೇರಿದರೇ ಮಾತ್ರ ಅಭಿವೃದ್ಧಿ ಸಾಧ್ಯ-ಮಲ್ಲಿಕಾರ್ಜುನ ಖರ್ಗೆ.

ಚಿಕ್ಕಮಗಳೂರು,ಏಪ್ರಿಲ್,24,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಿರುವ ಸಮಯದಲ್ಲೇ ಲಿಂಗಾಯತ ಸಿಎಂ ವಿಚಾರ ಭಾರಿ ಚರ್ಚೆಯಾಗುತ್ತಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾದ ವಾಗ್ವಾದಗಳು ನಡೆಯುತ್ತಲೇ ಇವೆ. ಈ ಕುರಿತು ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಒಂದು ಜಾತಿಯಿಂದ ದೇಶ ಕಟ್ಟಲು ಆಗಲ್ಲ: ಎಲ್ಲರೂ ಸೇರಿದರೇ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಒಂದೇ ಜಾತಿ ಧರ್ಮದವರು ಎಲ್ಲಾ ಪಕ್ಷದಲ್ಲೂ ಇರ್ತಾರೆ.  ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋದರೇ ಮಾತ್ರ ಅಭಿವೃದ್ದಿಗೆ ಪೂರಕ ಎಂದರು.ಒಂದು ಜಾತಿಯಿಂದ ದೇಶ ಕಟ್ಟಲು ಆಗಲ್ಲ: ಎಲ್ಲರೂ ಸೇರಿದರೇ ಮಾತ್ರ ಅಭಿವೃದ್ಧಿ ಸಾಧ್ಯ-ಮಲ್ಲಿಕಾರ್ಜುನ ಖರ್ಗೆ AICC President Mallikarjuna Khar given grand welcome by KPCC, Grand convention in Bengalu...

ಕಾಂಗ್ರೆಸ್ ಗೆ ಚಿಕ್ಕಮಗಳೂರು ಲಕ್ಕಿಜಿಲ್ಲೆ ಇಂದಿರಾಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಬಂದಿದ್ದವು.  ಆ ಚುನಾವಣೆ ಗೆದ್ದ ಮೇಲೆ ದೇಶದ ಚಿತ್ರಣವೇ ಬದಲಾಯಿತು. 80 ಜನರಲ್ ಎಲೆಕ್ಷನ್ ಇಡೀ ದೇಶದಲ್ಲಿ ಮೆಜಾರಿಟಿ ಬಂತು. ದೇಶದ ಚಿತ್ರಣ ಬದಲು ಮಾಡಿವ ಶಕ್ತಿ ನೀಡಿದ್ದು ಕಾಂಗ್ರೆಸ್  ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Key words: Lingayath-CM-AICC-president-Mallikarjuna kharge