Sunday, August 23, 2026

BDA Apartments

Home Front Page ಕೆ’ಅರ್’ಎಸ್ ಭಾಗದ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದವರಿಗೆ ಪ್ರಾಣ ಬೆದರಿಕೆ: ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ...

ಕೆ’ಅರ್’ಎಸ್ ಭಾಗದ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದವರಿಗೆ ಪ್ರಾಣ ಬೆದರಿಕೆ: ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

ಮೈಸೂರು, ಜುಲೈ 11, 2021 (www.justkannada.in): ಕೆ ಅರ್ ಎಸ್ ಭಾಗದಲ್ಲಿ ಗಣಿಗಾರಿಕೆ ನಿಷೇಧದ ಬಗ್ಗೆ ಸಾಕಷ್ಟು ಮನವಿ ಮಾಡಿದ್ದೇವೆ. ಗಣಿಗಾರಿಕೆ ವಿರುದ್ದ ಹೋರಾಟ ಮಾಡಿದವರಿಗೆ ಪ್ರಾಣ ಬೆದರಿಕೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ಗಣಿಗಾರಿಕೆ ಯಿಂದ ಮುಂದೆ ಕೆ ಆರ್ ಎಸ್ ಡ್ಯಾಂ ಗೆ ಅಪಾಯ ಇದೆ. ಕುಮಾರಸ್ವಾಮಿ ಹಾಗೂ ಜೆ ಡಿ ಎಸ್ ಶಾಸಕರು ಸಿರಿಯಸ್ ಆಗಿ ಯೋಚನೆ ಮಾಡಬೇಕು. ಇಡೀ ಕೃಷಿಕರು ಕೆ ಅರ್ ಎಸ್ ನ ಅವಲಂಭಿಸಿದ್ದಾರೆ. ಮಂಡ್ಯ ಜಿಲ್ಲೆಯ ಸಾಮಾನ್ಯ ಜನಕ್ಕೂ ಅನುಮಾನ ಇದೆ ಎಂದು ಹೇಳಿದ್ದಾರೆ.

ಇಪ್ಪತು ವರ್ಷದಿಂದ ಈವರೆಗೂ ಕೆ ಅರ್ ಎಸ್  ಗೆ ಅಪಾಯ ಇದೆ. ಅಕ್ರಮ, ಸಕ್ರಮ ಗಣಿಗಾರಿಕೆ ಆಲ್ಲ. ಸಂಪೂರ್ಣ ಗಣಿಗಾರಿಕೆ ನಿಷೇಧ ಆಗಬೇಕು. ಸುಮಲತಾ ಹೋರಾಟಕ್ಕೆ ರೈತ ಸಂಘ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದಾರೆ.