‘ಆ 17 ಮಂದಿ’ಗೂ ನನಗೂ ಸಂಬಂಧ ಇಲ್ಲ ಎಂದ ಶಾಸಕ ಎನ್.ಮಹೇಶ್

ಮೈಸೂರು, ಜುಲೈ 11, 2021 (www.justkannada.in):  17 ಮಂದಿಗೂ ನನಗೂ ಸಂಬಂಧ ಇಲ್ಲ. ನಾನೇ ಬೇರೆ ಅವರೇ ಬೇರೆ, ಅವರ ಜೊತೆ ನಾನು ಗುರುತಿಸಿಕೊಂಡಿಲ್ಲ ಎಂದು ಶಾಸಕ ಎನ್.ಮಹೇಶ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೇರುವವರಿಗೆ ಡಿಕೆ ಶಿವಕುಮಾರ್ ಆಹ್ವಾನ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ನನಗೆ ಆಹ್ವಾನ ಕೊಟ್ಟಿಲ್ಲ, ಆ 17ಮಂದಿಗೆ ಆಹ್ವಾನ ಕೊಟ್ಟಿದ್ದಾರೆ. ನಾನು ಆಗ ಬಿಎಸ್ಪಿಯಲ್ಲಿದ್ದೆ. ಈಗ ಸ್ವತಂತ್ರವಾಗಿದ್ದೀನಿ. ಸಮ್ಮಿಶ್ರ ಸರ್ಕಾರ ಕೆಡವುವಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿದರು.

ಯಡಿಯೂರಪ್ಪ ಸರ್ಕಾರ ರಚನೆಯಾಗಲೂ ನನ್ನ ಪಾತ್ರ ಇಲ್ಲ. ಯಡಿಯೂರಪ್ಪ ವಿಶ್ವಾಸಮತಯಾಚನೆ ಮಾಡಿದಾಗ ನಾನು ಆಬ್ಜೆಂಟ್ ಆಗಿದ್ದೆ. ಹಾಗಾಗಿ ಸರ್ಕಾರ ಬೀಳಿಸುವಲ್ಲಿ ಹಾಗೂ ರಚನೆ ಮಾಡುವಲ್ಲಿ ನನ್ನ ಪಾತ್ರವಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ವಿಶ್ವಾಸದಲ್ಲಿದ್ದೀನಿ. ನಾನು ಸದ್ಯಕ್ಕೆ ಯಾವ ಪಕ್ಷ ಶೆರುವ ಬಗ್ಗೆಯೂ ತೀರ್ಮಾನ ಮಾಡಿಲ್ಲ ಎಂದರು.