ಕೊರೋನಾ ತಡೆ ಬಗ್ಗೆ ತನ್ನ ಕ್ಷೇತ್ರದ ಜನತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ರಿಂದ ಪಾಠ…

ಬಾಗಲಕೋಟೆ,ಜೂ,3,2020(www.justkannada.in): ಮುಂಬೈನಿಂದ ರಾಜ್ಯಕ್ಕೆ  ಬಂದವರಿಂದಾಗಿ  ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿದೆ. ಈಗೆ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರದ ಜನತೆಗೆ ಕೊರೋನಾ ತಡೆ ಬಗ್ಗೆ ಪಾಠ ಮಾಡಿದ್ದಾರೆ.

ಇಂದು ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಜನರಿಗೆ ಕೊರೋನಾ ತಡೆ ಬಗ್ಗೆ ಪಾಠ ಮಾಡಿದ್ದಾರೆ.  ಹೊರಗೆ ಹೋಗುವಾಗ ಮಾಸ್ಕ್ ಧರಿಸಿ ಹೊರಗೆ ಹೋಗಬೇಕು. ಏನಾದರೂ ಮುಟ್ಟಿದರೇ  ಕೈ ತೊಳೆದುಕೊಳ್ಳಬೇಕು. ಹಾಗೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.lesson-former-cm-siddaramaiah-people-corona-virus

ಹಾಗೆಯೇ ಅಪಾರ ಜನ ಸೇರಿದ ಬಗ್ಗೆಯೂ ಪ್ರಸ್ತಾಪಿಸಿದ ಸಿದ್ಧರಾಮಯ್ಯ, ನೀವು ಇಲ್ಲಿ ಅಕ್ಕಪಕ್ಕ ನಿಂತಿದ್ದೀರಿ. ಯಾರಾದ್ರೂ ನನ್ನ ಮೇಲೆ ಕೇಸ್ ಹಾಕಬಹುದು.ಗುಂಪಾಗಿ ನಿಂತಿದ್ರು ಅಂತ ಕೇಸ್ ಹಾಕಬಹುದು. ಹೀಗಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

Key words: lesson – former CM -Siddaramaiah – people – -corona virus