ತಡರಾತ್ರಿ ದಾಳಿ ನಡೆಸಿ ಕೊಟ್ಟಿಗೆಯಲ್ಲಿದ್ದ ಕರು ಕೊಂದ ಚಿರತೆ : ಗ್ರಾಮಸ್ಥರಲ್ಲಿ ಆತಂಕ…

ಮೈಸೂರು, ಸೆಪ್ಟಂಬರ್,16,2020(www.justkannada.in):  ಚಿರತೆ ದಾಳಿಗೆ ಸಿಲುಕಿ 3ವರ್ಷದ ಗಂಡು ಕರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.jk-logo-justkannada-logo

ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕಿನ ಎಂ.ಕನ್ನೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಗ್ರಾಮದ ಕೇಶವಮೂರ್ತಿ ಎಂಬುವವರಿಗೆ‌ ಸೇರಿದ ಮನೆಯ ಕೊಟ್ಟೆಗೆಗೆ ದಾಳಿ ನಡೆಸಿದ ಚಿರತೆ ಕೊಟ್ಟಿಗೆಯಲ್ಲಿದ್ದ ಕರುವನ್ನ ಕೊಂದಿದೆ. ಇನ್ನು ದಾಳಿ ನಡೆಸಿದ್ದ ಚಿರತೆ ಅನೇಕ ಬಾರಿ ಗ್ರಾಮಕ್ಕೆ ಬಂದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿಂದೆಯೂ ಚಿರತೆ ಸಾಕು ಪ್ರಾಣಿಗಳನ್ನ ಕೊಂದು ಹಾಕಿದೆ.leopard-killed-calf-anxiety-villagers-mysore

ಹೀಗಾಗಿ ಬೋನಿರಿಸಿ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖಾ ಸಿಬ್ಬಂದಿಗೆ ಒತ್ತಾಯಿಸಿದ್ದಾರೆ.  ಸ್ಥಳಕ್ಕೆ ಎಚ್.ಡಿ.ಕೋಟೆ ವಲಯ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Key words:  leopard -killed – calf –  Anxiety –villagers-mysore