ಬರಪರಿಹಾರಕ್ಕಾಗಿ ಕೇಂದ್ರದ ವಿರುದ್ದ ಕಾನೂನು ಹೋರಾಟ: ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿ- ಸಿಎಂ ಸಿದ್ದರಾಮಯ್ಯ.

ಬೆಂಗಳೂರು,ಮಾರ್ಚ್,23,2024(www.justkannada.in): ಬರಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ವಿರುದ್ದ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದು,  ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು  ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಸರ್ಕಾರ 5 ತಿಂಗಳಗಳ ಕಾಲ ಕಾದಿದೆ. ಕೇಂದ್ರದ ವಿರುದ್ದ ಹೋರಾಟಕ್ಕೆ ನಾವು ನಿರ್ಧರಸಿದ್ದೇವೆ. ಎನ್ ಡಿಆರ್ ಎಫ್,   ಎಸ್ ಡಿಆರ್ ಎಫ್ ನಲ್ಲಿ  ಪ್ರತಿ ವರ್ಷ ಎಷ್ಟು ಹಣ ಇಡಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ.  ಕೇಂದ್ರ ಸರ್ಕಾರ ಶೇ.75ರಷ್ಟು ಕೊಡುತ್ತೆ. ರಾಜ್ಯ ಸರ್ಕಾರ ಶೇ. 25 ರಷ್ಟು ಭರಿಸುತ್ತೆ ಎಂದು ತಿಳಿಸಿದರು.

ರಾಜ್ಯದಲ್ಲಿ 223 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದ್ದೇವೆ. ಇದೀಗ ಬರಪರಿಹಾರ ಕೊಡಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಆರ್ಟಿಕಲ್ 32ರ ಅಡಿ ಸ ಸುಪ್ರೀಂಕೋರ್ಟ್ ಗೆ  ರಿಟ್ ಅರ್ಜಿ ಸಲ್ಲಿಸಿದ್ದೇವೆ. ಸುಪ್ರೀಂಕೋರ್ಟ್ ಗೆ ರಜೆ ಇದೆ.  1 ವಾರ ರಜೆ ಮುಗಿದಬ ಳಿಕ ಕೂಡಲೇ ವಿಚಾರಣೆಗೆ ತೆಗೆದಿಕೊಳ್ಳುತ್ತಾರೆ ಎಂದರು.

Key words: Legal fight- against -Center – relief-Writ Petition – Supreme Court- CM Siddaramaiah.