ಮೈಸೂರಿನಲ್ಲಿ ತಡರಾತ್ರಿ ಖದೀಮರ ಕೈಚಳಕ: ಕೆಲವು ಅಂಗಡಿಗಳಲ್ಲಿ ಸರಣಿ ಕಳವು

ಮೈಸೂರು, ಮಾರ್ಚ್ 19, 2023 (www.justkannada.in): ಮೈಸೂರಿನಲ್ಲಿ ತಡರಾತ್ರಿ ಖದೀಮರ ಕೈಚಳಕ ತೋರಿದ್ದಾರೆ. ಹಲವು ಅಂಗಡಿ ಮಳಿಗೆಗಳಿಗೆ ನುಗ್ಗಿ ಕಳ್ಳತನ ಮಾಡಲಾಗಿದೆ.

ಅಂಗಡಿ ಮಳಿಗೆಗಳ ಶೆಲ್ಟರ್ ಮೀಟಿ ಕಳ್ಳತನ ಮಾಡಿರುವ ಘಟನೆ ನಗರದ ಶ್ರೀರಾಮಪುರ ಬಡಾವಣೆಯ 2ನೇ ಹಂತದಲ್ಲಿ ನಡೆದಿದೆ. ದೇವಯ್ಯನಹುಂಡಿ ಮುಖ್ಯರಸ್ತೆಯ ಆದ್ಯಾ ಸೂಪರ್ ಮಾರ್ಕೆಟ್ ಸೇರಿದಂತೆ ಐದಕ್ಕೂ ಹೆಚ್ಚು ಅಂಗಡಿಗಳಲ್ಲಿ ಕಳ್ಳತನ ಮಾಡಲಾಗಿದೆ.

ಸೆಂಟರ್ ಲಾಕ್ ಇಲ್ಲದ ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಅಶೋಕಪುರಂ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ವು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಕಳ್ಳರ ಸೆರೆಗೆ ಪೋಲಿಸರು ಬಲೆ ಬೀಸಿದ್ದಾರೆ.

ಶ್ರೀರಾಮಪುರದ ಆದ್ಯಾ ಸೂಪರ್ ಮಾರ್ಕೆಟ್ ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಗಡಿ ಶೆಲ್ಟರ್ ಹೊಡೆದು ಒಳಹೊಕ್ಕಿರು ದೃಶ್ಯ ಸೆರೆಯಾಗಿದೆ. ಅಂಗಡಿಯಲ್ಲಿರುವ ಕ್ಯಾಸ್ ಕೌಂಟರ್ ತೆಗೆಯಲು ಯತ್ನಿಸಿ ಸುಮಾರು 45 ಸಾವಿರ ನಗದು ಕಳವು ಮಾಡಲಾಗಿದೆ.