ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ

ಬೆಂಗಳೂರು, ಮಾರ್ಚ್ 19, 2023 (www.justkannada.in): ಭಾರತದ ಪ್ರಜಾಪ್ರಭುತ್ವದ ಸ್ಥಿತಿಯನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ಯಶಸ್ಸು ಕೆಲವರಿಗೆ ನೋವುಂಟು ಮಾಡುತ್ತಿದೆ. ಅದಕ್ಕಾಗಿಯೇ ಅವರು ಅದರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ

ದೇಶವು ಆತ್ಮವಿಶ್ವಾಸ ಮತ್ತು ಸಂಕಲ್ಪದಿಂದ ತುಂಬಿರುವಾಗ ಪ್ರಪಂಚದ ಬುದ್ಧಿಜೀವಿಗಳು ಭಾರತದ ಬಗ್ಗೆ ಆಶಾವಾದಿಗಳಾಗಿದ್ದರೆ, ನಿರಾಶಾವಾದದ ಬಗ್ಗೆ ಮಾತನಾಡುತ್ತಾರೆ, ದೇಶವನ್ನು ಕಳಪೆಯಾಗಿ ತೋರಿಸುತ್ತಾರೆ ಎಂದು ಮೋದಿ ಟೀಕಿಸಿದ್ದಾರೆ.

ಯಾವುದಾದರೂ ಶುಭಕಾರ್ಯಗಳು ನಡೆದಾಗ ಟೀಕೆ ಮಾಡುವ ಸಂಪ್ರದಾಯವಿದೆ, ಹಾಗಾಗಿ, ಇಷ್ಟೆಲ್ಲ ಶುಭಕಾರ್ಯಗಳು ನಡೆಯುವಾಗ ಕೆಲವರು ಈ ಟೀಕೆ ಮಾಡುವ ಹೊಣೆ ಹೊತ್ತುಕೊಂಡಿದ್ದಾರೆ’ ಎಂದು ಪರೋಕ್ಷ ಟೀಕಾಪ್ರಹಾರ ನಡೆಸಿದ್ದಾರೆ.