ಕ್ಲೈಮ್ಯಾಕ್ಸ್ ಹಂತ ತಲುಪಿದ ಮೈವಿವಿ ಕುಲಪತಿ ಆಯ್ಕೆ ಪ್ರಕ್ರಿಯೆ

ಮೈಸೂರು, ಮಾರ್ಚ್ 19, 2023 (www.justkannada.in): ಮೈಸೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿ ಆಯ್ಕೆ ಸಂಬಂಧ ಬೆಂಗಳೂರಿನ ಸಿಎಂಆರ್ ಎವಿ ವಿಶ್ರಾಂತ ಕುಲಪತಿ ಪ್ರೊ.ಎಚ್‌.ಎಸ್.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ಮೈಸೂರು ವಿವಿ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಸ್.ಗುರು, ಭೌತಶಾಸ್ತ್ರ ವಿಭಾಗದ ಪ್ರೊ.ಲೋಕನಾಥ್‌, ಬೆಂಗಳೂರು ವಿವಿಯ ಡಾ.ಶರತ್‌ ಅನಂತಮೂರ್ತಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸುದೀರ್ಘ ವಾಗಿ ಚರ್ಚಿಸಿದ ಬಳಿಕ ಮೂವರ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಸರ್ಕಾರ ಇದನ್ನು ಪರಿಶೀಲಿಸಿ ರಾಜ್ಯಪಾಲರ ಅಂಕಿ ತಕ್ಕೆ ಕಳುಹಿಸಲಿದೆ ಎಂದು ಶೋಧನಾ ಸಮಿತಿ ಅಧ್ಯಕ್ಷ ಪ್ರೊ.ಎಚ್.ಎಸ್.ಶಿವಕುಮಾರ್ ತಿಳಿಸಿದ್ದಾರೆ.

ಈ ಹಿಂದಿನ ಶೋಧನಾ ಸಮಿತಿ ಸಭೆಯ‍ಲ್ಲಿ ಮನೋ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಜಿ.ವೆಂಕಟೇಶ್ ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡ ಲಾಗಿತ್ತು. ಈ ಬಾರಿ ಅವರನ್ನು ಕೈ ಬಿಟು ಲೋಕನಾಥ್‌ ಹೆಸರು ಸೇರಿಸ ಲಾಗಿದೆ ಎಂದು ಎನ್ನಲಾಗಿದೆ.